ಶಿವಮೊಗ್ಗ:ನಗರದಲ್ಲಿ ಫೆ.20ರ ರಾತ್ರಿ ಕೊಲೆಯಾದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಹರ್ಷ ಕುಟುಂಬಸ್ಥರಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಅವರು ಫೋನ್ ಕರೆ ಮೂಲಕ ಪ್ರಟಿಸಿದ್ದಾರೆ. ಮಾರ್ಚ್ 6ರಂದು ಹರ್ಷನ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನಾನು ಹೋಗಿ 25 ಲಕ್ಷ ರೂ ಪರಿಹಾರ ನೀಡುತ್ತೆವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪ, ಹರ್ಷ ಕೊಲೆಯ ಬಗ್ಗೆ ಬೊಮ್ಮಯಿ ದುಃಖವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿ ಹರ್ಷನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
(ಇದನ್ನೂ ಓದಿ: ಹರ್ಷನ ಕುಟುಂಬಕ್ಕೆ ₹10 ಲಕ್ಷ ನೆರವು ಘೋಷಿಸಿದ ಸಚಿವ ಅಶ್ವತ್ಥನಾರಾಯಣ್)
ವಿಶ್ವನಾಥ್ ಅವರ ಕುಟುಂಬಕ್ಕೆ ಈಗ ಸಾಂತ್ವನ ಕೇಳಿ ಬರುತ್ತಿದೆ. ಕೊಲೆಯಾದಾಗ ಅವರಿಗೆ 18 ಲಕ್ಷ ರೂ.ಗಳನ್ನು ಅವರ ಪತ್ನಿ ಹಾಗೂ ಅವರ ತಂದೆಗೆ ಹಿಂದೂಪರ ಸಂಘಟನೆಗಳು ಸಂಗ್ರಹ ಮಾಡಿ ನೀಡಿದ್ದವು. ವಿಶ್ವನಾಥ್ ಅವರ ಎರಡನೇ ಪತ್ನಿ ವಾಪಸ್ ಅವರ ತಂದೆ ಮನೆಗೆ ಹೋಗಿದ್ದಾರೆ. ಅವರ ತಂದೆ ತೀರಿ ಹೋಗಿದ್ದಾರೆ. ಈಗ ಕಾಂಗ್ರೆಸ್ನವರು ಅವರ ಬಗ್ಗೆ ಅನುಕಂಪ ತೋರಿಸುತ್ತಿರುವುದು ನೋಡಿದ್ರೆ ಅಚ್ಚರಿಯಾಗುತ್ತದೆ. ನಾವು ಹರ್ಷನಿಗೆ 25 ಲಕ್ಷ ರೂ ನೀಡಿದಂತೆ, ಅಂದು ಕಾಂಗ್ರೆಸ್ ಸರ್ಕಾರ ಒಂದೇ ಒಂದು ರೂಪಾಯಿ ವಿಶ್ವನಾಥ್ ಕುಟುಂಬಕ್ಕೆ ನೀಡಿರಲಿಲ್ಲ. ವಿಶ್ವನಾಥ್ ಯಾವುದೇ ಹಿಂದೂ ಸಂಘಟನೆಗೆ ಸೇರಿರಲಿಲ್ಲ. ಅವರು ಕೇವಲ ಹಿಂದು ಯುವಕನಾಗಿದ್ರು ಅಷ್ಟೆ ಎಂದರು.
ಮುಸ್ಲಿಂ ಕೊಲೆಗಾರರ ಬಗ್ಗೆ ಕಾಂಗ್ರೆಸ್ ನವರು ಯಾಕೆ ಇದುವರೆಗೂ ಮಾತನಾಡುತ್ತಿಲ್ಲ. ಜಿಲ್ಲಾ ಕಾಂಗ್ರೆಸ್ನವರು ಹೇಳಿಕೆ ನೀಡಿದ್ದಾರೆ. ಆದರೆ ರಾಜ್ಯ ನಾಯಕರು ಮಾಡುತ್ತಿಲ್ಲ. ಡಿಕೆಶಿ ಅವರು ಪಾದಯಾತ್ರೆ ಮುಗಿಸಿ ಬರ್ತಿನಿ ಅಂತ ಹೇಳಿದ್ದಾರೆ ಇದನ್ನು ಸ್ವಾಗತ ಮಾಡುತ್ತೇನೆ. ಮುಸ್ಲಿಂ ಗೂಂಡಾಗಳು ನಡೆಸುವ ದುಷ್ಕೃತ್ಯಗಳನ್ನು ಪಕ್ಷಾತೀತವಾಗಿ ಖಂಡಿಸದೆ ಹೋದ್ರೆ, ಕಾಂಗ್ರೆಸ್ ಜೊತೆ ಇದೆ ಎಂಬ ಭಾವನೆ ಬರುತ್ತದೆ ಎಂದು ತಿಳಿಸಿದರು. ಯು.ಟಿ.ಖಾದರ್ ಅವರು ಕಾಂಗ್ರೆಸ್ನ ಮುಸ್ಲಿಂ ಶಾಸಕರ ಸಭೆ ನಡೆಸಿದ್ದರು. ಇದರಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್ಐ ಅನ್ನು ನಿಷೇಧಿಸಬೇಕು ಎಂದು ಎಲ್ಲಾ ಕಾಂಗ್ರೆಸ್ ಶಾಸಕರು ಹೇಳಿದ್ದರು. ಆದರೆ ಕಾಂಗ್ರೆಸ್ನ ಸಿಎಂ ಸ್ಥಾನದ ರೇಸ್ನಲ್ಲಿ ಇರುವ ಇಬ್ಬರು ನಾಯಕರುಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಾತ್ರ ಗಲಾಟೆಗೆ ಬಿಜೆಪಿ, ಆರ್ ಎಸ್ ಎಸ್ ಕಾರಣ ಎಂದು ಹೇಳುತ್ತಿದ್ದಾರೆ, ಇದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಎಸ್ ಡಿ ಪಿ ಐ ನಿಷೇಧದ ಕುರಿತು ನಮ್ಮ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಚರ್ಚೆ ನಡೆಸುತ್ತಿದ್ದೆವೆ ಎಂದರು.
ಹಾನಿಗೊಳದಾದವರಿಗೆ ಸರ್ಕಾರ ಪರಿಹಾರ ನೀಡಲಿದೆ:
ಮೆರವಣಿಗೆಯಲ್ಲಿ ವೇಳೆ ಹಾನಿಗೊಳಗಾದ ಅಂಗಡಿಯವರಿಗೆ ಸರ್ಕಾರ ಪರಿಹಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಹರ್ಷ ಕೊಲೆ ಬಳಿಕ ಆತನ ಕುಟುಂಬಕ್ಕೆ ಬಿಜೆಪಿ ನಾಯಕರು ಸೇರಿ ಹಲವರು ಧನ ಸಹಾಯ ಮಾಡುತ್ತಿದ್ದು, ಇದೀಗ ಸರ್ಕಾರವೂ 25 ಲಕ್ಷ ರೂ. ನೀಡಲಿದೆ. ಹರ್ಷ ಹತ್ಯೆಯ ಬಳಿಕ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ಜಿಲ್ಲಾಡಳಿತ ಒಂದು ವಾರದ ಕಾಲ ನಿಷೇಧಾಜ್ಞೆ ಘೋಷಿಸಿತ್ತು. ಇದೀಗ ನಗರ ಸಹಜ ಸ್ಥಿತಿಗೆ ಮರಳಿದ್ದು, ಶಾಲಾ-ಕಾಲೇಜು ಪುನಾರಂಭಗೊಂಡಿವೆ.