ಶಿವಮೊಗ್ಗ: ಮಾಜಿ ಸ್ಪೀಕರ್ ಹಾಗೂ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ನಿನ್ನೆ ಕೊರೊನಾ ವ್ಯಾಕ್ಸಿನ್ ಎರಡನೇ ಡೋಸ್ ಪಡೆಯಲು ಹೋಗಿದ್ದರು. ಆದರೆ, ಲಸಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ನಿರಾಶರಾಗಿ ವಾಪಸ್ ಆಗಬೇಕಾಯಿತು.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಸಿಗದ ಕೋವಿಡ್ ಲಸಿಕೆ: ಸರ್ಕಾರದ ವಿರುದ್ಧ ಆಕ್ರೋಶ - Covid vaccine
ಸಾಗರದ ದೇವರಾಜ ಅರಸ್ ಭವನದಲ್ಲಿ ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಈ ವೇಳೆ ಕೊರೊನಾ ವ್ಯಾಕ್ಸಿನ್ ಎರಡನೇ ಡೋಸ್ ಪಡೆಯಲು ಹೋದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಲಸಿಕೆ ಸಿಗದ ಹಿನ್ನೆಲೆ ವಾಪಸ್ ಆಗಿದ್ದಾರೆ.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ
ಸಾಗರದ ದೇವರಾಜ ಅರಸ್ ಭವನದಲ್ಲಿ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ವ್ಯಾಕ್ಸಿನ್ ಎರಡನೇ ಡೋಸ್ ತೆಗೆದುಕೊಳ್ಳುವಂತೆ ಮೆಸೇಜ್ ಬಂದ ಹಿನ್ನೆಲೆ ಕಾಗೋಡು ತಿಮ್ಮಪ್ಪ ಲಸಿಕೆ ಪಡೆಯಲು ಹೋದಾಗ ಲಸಿಕೆ ಖಾಲಿಯಾಗಿದೆ ಎಂದು ಸಿಬ್ಬಂದಿ ತಿಳಿಸಿದೆ. ಇದರಿಂದಾಗಿ ಆಕ್ರೋಶಗೊಂಡ ತಿಮ್ಮಪ್ಪ ವಾಪಸ್ ಬಂದಿದ್ದಾರೆ.
ನಂತರ ಮಾತನಡಿದ ಅವರು, ಕೋವಿಡ್ ಲಸಿಕೆ ಪಡೆಯಲು ಹೋದಾಗ ನನಗೆ ಲಸಿಕೆ ಸಿಕ್ಕಿಲ್ಲ. ಸಾಗರದಂತಹ ಪಟ್ಟಣದಲ್ಲಿ ಈ ರೀತಿಯ ವ್ಯವಸ್ಥೆಯಿದೆ. ಇನ್ನು ಗ್ರಾಮಾಂತರ ಭಾಗದ ಕಥೆ ಏನು ಎಂದು ಸರ್ಕಾರದ ವಿರುದ್ಧ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.