ಕರ್ನಾಟಕ

karnataka

ETV Bharat / city

ಮುಂದಿನ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧೆ ಖಚಿತ

ಕಾಗೋಡು ತಿಮ್ಮಪ್ಪನವರ ಪುತ್ರಿ ಮತ್ತೆ ತಮ್ಮ ತಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತಿಳಿಸಿದ್ದಾರೆ. ಆದರೆ ಬಿಜೆಪಿಯಿಂದ ಕಾಂಗ್ರೆಸ್​ಗೆ ಬಂದು ಚುನಾವಣಾ ಟಿಕೆಟ್​ ಆಕಾಂಕ್ಷಿಯಾದ ಬೇಳೂರು ಗೋಪಾಲಕೃಷ್ಣ ಮೌನವಾಗಿದ್ದಾರೆ.

2023 election Kagodu Thimmappa
ಮುಂದಿನ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧೆ ಖಚಿತ

By

Published : Apr 1, 2022, 9:12 PM IST

ಶಿವಮೊಗ್ಗ: ಮುಂಬರುವ 2023 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಾಗರ ವಿಧಾನಸಭ ಕ್ಷೇತ್ರದಿಂದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಖಚಿತತೆಯನ್ನು ಕಾಗೋಡು ತಿಮ್ಮಪ್ಪನವರ ಪುತ್ರಿ ಡಾ. ರಾಜನಂದಿನಿ ಅವರು ಇಂದು ಸಾಗರದಲ್ಲಿ ಸ್ಪಷ್ಟಪಡಿಸಿದ್ದಾರೆ‌. ಕಳೆದ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪನವರು ಇದು ನನ್ನ ಕೊನೆಯ ಚುನಾವಣೆ ಎಂದು ಸ್ಪರ್ಧೆ ಮಾಡಿದ್ದರು.

ಮುಂದಿನ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧೆ ಖಚಿತ

ಇಂದು ಕಾಗೋಡು ತಿಮ್ಮಪ್ಪನವರ ಪುತ್ರಿ ಮತ್ತೆ ತಮ್ಮ ತಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ್ದು, ಕಾಗೋಡು ತಿಮ್ಮಪ್ಪನವರು ಈಗಲೂ ಗಟ್ಟಿ ಮುಟ್ಟಾಗಿದ್ದು, ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಬೇಳೂರು ಗೋಪಾಲಕೃಷ್ಣ ಸ್ಪರ್ಧಿಸಲು ಕಾತುರರಾಗಿದ್ದರು:ಬಿಜೆಪಿಯಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಕಾರಣ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಭಾರಿ ಸಾಗರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು. ಇದಕ್ಕಾಗಿ ಕ್ಷೇತ್ರದ ತುಂಬೆಲ್ಲಾ ಪ್ರವಾಸ ನಡೆಸುತ್ತಿದ್ದರು. ಆದರೆ, ಈಗ ತಮ್ಮ ಮುಂದಿನ ನಡೆ ಏನೆಂದು ಇನ್ನೂ ಬೇಳೂರು ಗೋಪಾಲಕೃಷ್ಣ ತಿಳಿಸಿಲ್ಲ.

ಇದನ್ನೂ ಓದಿ:ಥಾಯ್ಲೆಂಡ್ ಜೊತೆ ಶಿಕ್ಷಣ, ಐಟಿ, ಬಿಟಿ ಸಹಕಾರಕ್ಕೆ ರಾಜ್ಯ ಉತ್ಸುಕ : ಸಚಿವ ಡಾ. ಅಶ್ವತ್ಥ​ ನಾರಾಯಣ್​

ABOUT THE AUTHOR

...view details