ಕರ್ನಾಟಕ

karnataka

ಕಾಶ್ಮೀರ ಮುಕ್ತಿಗಾಗಿ ಹೋರಾಡಿದವರ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿದೆ... ಹೀಗೆ ಹೇಳಿದ ಶಿವಮೊಗ್ಗದ ನಾಯಕನಿವರು!

By

Published : Aug 5, 2019, 7:57 PM IST

60 ವರ್ಷಗಳ ನಂತ್ರ ಕಾಶ್ಮೀರ ಇತರ ರಾಜ್ಯಗಳಂತೆ ಸ್ವತಂತ್ರವಾಗಿದೆ. ಕಾಶ್ಮೀರ ಮುಕ್ತಿಗಾಗಿ ಹೋರಾಟ ನಡೆಸಿದ ಶ್ಯಾಮ್​ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ. ಕಾಶ್ಮೀರಕ್ಕೆ ಒಬ್ಬ ಪ್ರಧಾನಿ ಹಾಗೂ ಪ್ರತ್ಯೇಕ ಧ್ವಜ ಹೊಂದಿರುವುದನ್ನು ವಿರೋಧಿಸಿ ಸಾಕಷ್ಟು ಜನ ಹೋರಾಟ ನಡೆಸಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್​ ಅವರು ಕೂಡಾ ವಿರೋಧ ವ್ಯಕ್ತಪಡಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ಆಯನೂರು ಮಂಜುನಾಥ್

ಶಿವಮೊಗ್ಗ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 370 ನೇ ವಿಧಿ ಹಾಗೂ 35 (ಎ) ಅನ್ನು ರದ್ದು ಮಾಡುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಒಂದೇ ದೇಶ, ಒಂದೇ ಸಂವಿಧಾನ ಎಂದು ಹೋರಾಟ ನಡೆಸಿದವರ ಆತ್ಮಕ್ಕೆ ಶಾಂತಿ ಲಭಿಸಿದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

370 ನೇ ವಿಧಿ ರದ್ದು ಮಾಡಿರುವ ಕುರಿತು ಆಯನೂರು ಮಂಜುನಾಥ್ ಪ್ರತಿಕ್ರಿಯೆ

ಜಿಲ್ಲಾ ಬಿಜೆಪಿ‌ ಕಚೇರಿಯಲ್ಲಿ ಮಾತನಾಡಿದ ಅವರು, 60 ವರ್ಷಗಳ ನಂತರ ಕಾಶ್ಮೀರ ಇತರ ರಾಜ್ಯಗಳಂತೆ ಸ್ವತಂತ್ರವಾಗಿದೆ. ಕಾಶ್ಮೀರ ಮುಕ್ತಿಗಾಗಿ ಹೋರಾಟ ನಡೆಸಿದ ಶ್ಯಾಮ್​ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ. ಕಾಶ್ಮೀರ, ಭಾರತದ ಅವಿಭಾಜ್ಯ ಅಂಗ. ಕಾಶ್ಮೀರಕ್ಕೆ ಒಬ್ಬ ಪ್ರಧಾನಿ ಹಾಗೂ ಪ್ರತ್ಯೇಕ ಧ್ವಜ ಹೊಂದಿರುವುದನ್ನು ವಿರೋಧಿಸಿ ಸಾಕಷ್ಟು ಜನ ಹೋರಾಟ ನಡೆಸಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್​ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದರು.‌ ಇಂದು ಅವರ ಅಭಿಲಾಷೆ‌ ಈಡೇರಿದೆ. ಕಾಶ್ಮೀರದ 370 ನೇ ವಿಧಿಯನ್ನು ಅಬ್ದುಲ್​ ಹಾಗೂ ಸೈಯದ್ ಎಂಬ ಎರಡು ಕುಟುಂಬಗಳು ದುರ್ಬಳಕೆ ಮಾಡಿ ಕೊಂಡಿದ್ದರು ಎಂದರು.

ಕಾಶ್ಮೀರದಲ್ಲಿರುವ ನಿರುದ್ಯೋಗವನ್ನೇ ಬಂಡವಾಳ‌ ಮಾಡಿಕೊಂಡು ಅಲ್ಲಿನ ಯುವಕರನ್ನು ಉಗ್ರವಾದಿಗಳನ್ನಾಗಿ‌ ಮಾಡಲಾಗುತ್ತಿತ್ತು. ಕಾಶ್ಮೀರದ ದುಃಸ್ಥಿತಿ ಹಾಗೂ ಉಗ್ರಗಾಮಿಗಳ ಸ್ವರ್ಗವನ್ನಾಗಿ ಮಾಡಿದ್ದು ಇದೇ ಕಾಶ್ಮೀರದ ಎರಡು ಕುಟುಂಬಗಳು. 370 ವಿಧಿ ರದ್ದಾದ ಕಾರಣ ಅಲ್ಲಿ ಅನೇಕ ಕಂಪನಿಯವರು ಕಾರ್ಖಾನೆಯನ್ನು ಸ್ಥಾಪಿಸುತ್ತಾರೆ. ಇದರಿಂದ ಅಲ್ಲಿನ ನಿರುದ್ಯೋಗಿಗಳಿಗೆ ಕೆಲಸ ಲಭ್ಯವಾಗುತ್ತದೆ ಎಂದರು. ಈ ವೇಳೆ ಬಿಜೆಪಿಯ ಅನೇಕ ಮುಖಂಡರು ಹಾಜರಿದ್ದರು.

ABOUT THE AUTHOR

...view details