ಶಿವಮೊಗ್ಗ: ಅವತ್ತು ಕರ್ನಾಟಕ ಟು ಮುಂಬೈ. ಇವತ್ತು ಮುಂಬೈ ಟು ಗುವಾಹಟಿ. ಕರ್ನಾಟಕದಲ್ಲಿ ಎಂಟು ತಿಂಗಳ ಪ್ರಯತ್ನದಲ್ಲಿ ಬಿಜೆಪಿ ಆಪರೇಷನ್ ಮಾಡಿತ್ತು. ಮಹಾರಾಷ್ಟ್ರದಲ್ಲಿ ಒಂದೂವರೆ ವರ್ಷ ಪ್ರಯತ್ನ ಮಾಡಿದ್ದಾರೆ. ಈಗ ಅಲ್ಲಿ ರಾಜಿಕೀಯ ಮಾಡುತ್ತಿದ್ದಾರೆ. ಕರ್ನಾಟಕದವರು ಗಲಭೆ ಮಾಡಲಿಲ್ಲ. ಆದರೆ ಅಲ್ಲಿಯ ಪರಿಸ್ಥಿತಿ ಬೇರೆ ಇದೆ. ಇದನ್ನು ಹೇಗೆ ಬಿಜೆಪಿ ನಿರ್ವಹಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದರು.
ನಗರದಲ್ಲಿಂದು ಕರ್ನಾಟಕದಲ್ಲಿ 2008ರಲ್ಲಿ ಈ ಆಪರೇಷನ್ ಕಮಲ ಆರಂಭಿಸಿದರು. ಮತ್ತೆ 2014ರಲ್ಲಿ ಆಪರೇಷನ್ ಕಮಲ ಮಾಡಿ ಬಹಳಾ ರಾಜ್ಯಗಳಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದರು. ಈಗ ಎಲ್ಲಾ ಕಡೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜಸ್ಥಾನ ಅಥವಾ ಜಾರ್ಖಂಡ್ ಇರಬಹುದು ಎಂದರು.
ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರಾ?:ಕಾಂಗ್ರೆಸ್ ಮುಕ್ತ ಭಾರತ ಆಯ್ತು. ಇದೀಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರಾ?. ಪಶ್ಚಿಮ ಬಂಗಾಳದಲ್ಲಿ ಪ್ರಯತ್ನ ಮಾಡಿದರು. ಆದರೆ, ಹೋರಾಟ ಮಾಡಿ ಮಮತಾ ಬ್ಯಾನರ್ಜಿ ಉಳಿಸಿಕೊಂಡರು. ಅಲ್ಲಿ ಸಹ ಇಡಿ, ಬೇರೆ ಬೇರೆ ಸಂಸ್ಥೆ ಬಳಸಿಕೊಂಡು ನೋಟಿಸ್ ಕೊಟ್ಟರು. ಆತಂಕ ಸೃಷ್ಟಿ ಮಾಡಿದರು. ಅಂತಿಮವಾಗಿ ಎಲ್ಲಿಗೆ ತೆಗೆದುಕೊಂಡು ಹೋಗ್ತಾರೆ ನೋಡೋಣ. ಪ್ರಜಾಪ್ರಭುತ್ವ ಉಳಿಸಲು ಅಂತಿಮವಾಗಿ ಜನರಲ್ಲಿ ಪರಿವರ್ತನೆಯಾಗುತ್ತಾ ನೋಡೋಣ ಎಂದರು.