ಶಿವಮೊಗ್ಗ: ರೈತರ ಶೂನ್ಯ ಬಡ್ಡಿ ದರದ ಸಾಲ ಮರುಪಾವತಿ ಮಾಡಲು ಮೂರು ತಿಂಗಳು ಕಾಲಾವಧಿ ನೀಡಬೇಕೆಂದು ಕಾಂಗ್ರೆಸ್ ಎಂಎಲ್ಸಿ ಆರ್. ಪ್ರಸನ್ನ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರೈತರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ: ಎಂಎಲ್ಸಿ ಆರ್. ಪ್ರಸನ್ನ ಕುಮಾರ್ - shivomog news
ಲಾಕ್ಡೌನ್ನಿಂದಾಗಿ ರೈತರ ಬೆಳೆಗಳು ಸಹ ಸರಿಯಾಗಿ ಮಾರಾಟವಾಗುತ್ತಿಲ್ಲ. ಇದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಆರ್. ಪ್ರಸನ್ನ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ. ಸದ್ಯ ಲಾಕ್ಡೌನ್ ಇರುವುದರಿಂದ ರೈತರು ಬ್ಯಾಂಕ್, ಸಹಕಾರ ಸಂಘಗಳಿಗೆ ತೆರಳಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ನಿಂದಾಗಿ ರೈತರ ಬೆಳೆಗಳು ಸಹ ಸರಿಯಾಗಿ ಮಾರಾಟವಾಗುತ್ತಿಲ್ಲ. ಇದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಹೊಸನಗರದಲ್ಲಿ ಒಂದು ಕೋವಿಡ್ ಕೇರ್ ಸೆಂಟರ್ ತೆರೆಯಲು ಡಿಸಿಗೆ ಮನವಿ ಸಲ್ಲಿಸಿದರು. ಪ್ರತಿ ದಿನ 100 ಪಾಸಿಟಿವ್ ಕೇಸ್ ಬರುತ್ತಿರುವುದರಿಂದ ಕೋವಿಡ್ ಕೇರ್ ತೆರೆಯಲು ಅವರು ಮನವಿ ಮಾಡಿದ್ದಾರೆ.