ಶಿವಮೊಗ್ಗ:ಕೋವಿಡ್ ಪಾಸಿಟಿವಿಟಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ತನಕ ಕಂಟೈನ್ಮೆಂಟ್ ವಲಯಗಳನ್ನು ಕಟ್ಟುನಿಟ್ಟಿನಿಂದ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನಿರ್ವಹಣೆ ಹಾಗೂ ಮಾನ್ಸೂನ್ ಸಿದ್ಧತೆಗಳ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಂಟೈನ್ಮೆಂಟ್ ವಲಯವನ್ನು ಕನಿಷ್ಠ 14 ದಿನಗಳಿಗಿಂತ ಮೊದಲು ತೆರವುಗೊಳಿಸಬಾರದು. ಈ ವಲಯಗಳಲ್ಲಿ ಕೊರೊನಾ ತಪಾಸಣೆ ವ್ಯವಸ್ಥಿತವಾಗಿ ನಡೆಸಬೇಕು. ಇದಕ್ಕಾಗಿ ಸಂಚಾರಿ ವಾಹನದ ವ್ಯವಸ್ಥೆ ಮಾಡಬೇಕು. ಪಾಸಿಟಿವ್ ವ್ಯಕ್ತಿಗಳನ್ನು ಹೋಮ್ ಐಸೋಲೇಷನ್ ಆಗಲು ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ನಲ್ಲಿರಿಸಬೇಕು. ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಹೋಮ್ ಐಸೋಲೇಷನ್ಗೆ ಹೆಚ್ಚಿನ ಅವಕಾಶ ನೀಡಿರುವುದು ಕಂಡು ಬಂದಿದ್ದು, ಇದನ್ನು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೊರೊನಾದಿಂದ ಚೇತರಿಸಿಕೊಳ್ಳುವ ಮಕ್ಕಳ ಆರೋಗ್ಯದ ಮೇಲೆ ಆಶಾ ಕಾರ್ಯಕರ್ತೆಯರು 6 ವಾರಗಳ ಕಾಲ ನಿಗಾ ವಹಿಸಬೇಕು. ಯಾವುದೇ ಮಕ್ಕಳಿಗೆ 3 ದಿನಗಳಿಂದ ಜ್ವರ ನಿರಂತರವಾಗಿ ಬರುತ್ತಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ಒದಗಿಸಬೇಕು. ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಪೂರಕವಾಗಿ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ದುರಸ್ತಿಯಂತಹ ಅಂಗಡಿಗಳಿಗೆ ಸೀಮಿತ ಅವಧಿಯ ಮಿತಿಗೆ ಒಳಪಟ್ಟು ತೆರೆಯಲು ಅವಕಾಶ ನೀಡಬಹುದಾಗಿದೆ. ಅವಶ್ಯಕ ವಸ್ತುಗಳ ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಸಾಮಾಗ್ರಿ ಪೂರೈಕೆ ಮಾಡಲು ಅವಕಾಶವಿದೆ ಎಂದರು.
ಮಾನ್ಸೂನ್ ಸಿದ್ಧತೆ