ಶಿವಮೊಗ್ಗ: ಫೆಬ್ರವರಿ 20ರಂದು ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಪ್ರತೀಕಾರವಾಗಿ ಅನ್ಯ ಧರ್ಮದ ಮುಖಂಡನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ 13 ಜನರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಹರ್ಷ ಕೊಲೆಯಾದ ನಂತರ ಶಿವಮೊಗ್ಗದಲ್ಲಿ ಗಲಾಟೆ ನಡೆದಿತ್ತು. ಹರ್ಷನ ಮೃತದೇಹ ಮೆರವಣಿಗೆಯಲ್ಲಿ ಕಲ್ಲು ತೂರಾಟ ಉಂಟಾಗಿತ್ತು. ಈ ಗಲಾಟೆಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ನಡೆಸಿದಾಗ ಪೊಲೀಸರಿಗೆ ಕೆಲ ಸತ್ಯ ತಿಳಿದು ಬಂದಿದೆ.
ಕೊಲೆ ಸ್ಕೇಚ್ ಬಗ್ಗೆ ಬಾಯ್ಬಿಟ್ಟ ರೌಡಿಶೀಟರ್ : ಪತ್ರಕರ್ತರ ಮೇಲೆ ಹಲ್ಲೆ ಕುರಿತು ತನಿಖೆ ಪ್ರಾರಂಭಿಸಿದ ಪೊಲೀಸರು ಮೊದಲು ವಿಶ್ವಾಸ್ ಅಲಿಯಾಸ್ ಜೇಟ್ಲಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನ್ಯ ಕೋಮಿನ ಮುಖಂಡ ಅಲ್ಲಾವುದ್ದೀನ್ ಎಂಬಾತನನ್ನು ಕೊಲೆ ಮಾಡಲು ಸ್ಕೆಚ್ ಹಾಕಿರುವುದಾಗಿ ತಿಳಿಸಿದ್ದಾನೆ. ನಂತರ ಪೊಲೀಸರು ವಿಶ್ವಾಸ್ ಜೊತೆ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರೆಲ್ಲರು ತಾವು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರು: ಎ1- ರಾಕೇಶ್, ಎ2- ವಿಶ್ವಾಸ್ ಅಲಿಯಾಸ್ ಜೇಟ್ಲಿ, ಎ3- ನಿತಿನ್ ಅಲಿಯಾಸ್ ವಾಸನೆ, ಎ4- ಯಶವಂತ ಅಲಿಯಾಸ್ ಬೆಂಗಳೂರು, ಎ5- ಕಾರ್ತಿಕ್ ಅಲಿಯಾಸ್ ಕಟ್ಟೆ, ಎ6- ಆಕಾಶ್ ಅಲಿಯಾಸ್ ಕಟ್ಟೆ, ಎ7- ಪ್ರವೀಣ್ ಅಲಿಯಾಸ್ ಕುಲ್ಡ, ಎ8- ಸುಹಾಸ್ ಅಲಿಯಾಸ್ ಅಪ್ಪು, ಎ9- ಸಚ್ಚಿನ್ ರಾಯ್ಕರ್, ಎ10- ಸಂಕೇತ್ ಅಲಿಯಾಸ್ ದಿಟ್ಟ, ಎ11- ರಘು ಅಲಿಯಾಸ್ ಬೊಂಡ, ಎ12- ಮಂಜು, ಎ13- ವಿಶಾಲ್ ಅಲಿಯಾಸ್ ಕೂತ್ತಾ ಬಂಧಿತರು.