ಕರ್ನಾಟಕ

karnataka

ETV Bharat / city

ಶುಂಠಿ ಜೊತೆ ಗಾಂಜಾ ಬೆಳೆದ ರೈತ... 'ಒಳಶುಂಠಿ' ಚಿವುಟಿದ ಪೊಲೀಸರು

ಶಿವಮೊಗ್ಗ ತಾಲೂಕು ಚೋರಡಿ ಗ್ರಾಮದಲ್ಲಿ ಶುಂಠಿ ಹೊಲದಲ್ಲಿ ಬೆಳೆದಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು‌ಕೊಂಡಿದ್ದಾರೆ.

ಶುಂಠಿ ಹೊಲದಲ್ಲಿ ಬೆಳೆದ ಗಾಂಜಾ ವಶ

By

Published : Sep 24, 2019, 7:12 PM IST

ಶಿವಮೊಗ್ಗ: ಶುಂಠಿ ಜೊತೆ ಬೆಳೆದಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು‌ಕೊಂಡಿದ್ದಾರೆ.

ಶುಂಠಿ ಹೊಲದಲ್ಲಿ ಬೆಳೆದ ಗಾಂಜಾ ವಶ

ಶಿವಮೊಗ್ಗ ತಾಲೂಕು ಚೋರಡಿ ಗ್ರಾಮದಲ್ಲಿ ಜಾನಿ ಬಿನ್ ದಾಕ್ಲ್ಯಣ್ಣ ಎಂಬವರ ಶುಂಠಿ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು, 21 ಗಾಂಜಾ ಗಿಡಗಳನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಜಾನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಅಬಕಾರಿ ಪೊಲೀಸರು ಭಾಗಿಯಾಗಿದ್ದರು.

ABOUT THE AUTHOR

...view details