ಕರ್ನಾಟಕ

karnataka

ETV Bharat / city

'ಕೊರೊನಾ ವಿರುದ್ಧ ಕನ್ನಡಿಗರ ಹೋರಾಟದ ಕಹಳೆ ಮೊಳಗಲಿ': ಹಾಡಿನ ಮೂಲಕ ಎಎಸ್​​ಐ ಜಾಗೃತಿ - ಕೊರೊನಾ ವೈರಸ್​

ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ದೇಶಕ್ಕೆ ಕಂಟಕವಾಗಿರುವ ಕೊರೊನಾ ತಡೆಗೆ ಜನಜಾಗೃತಿ ಮೂಡಿಸುತ್ತಿದ್ದು, ಇತ್ತ ಪೊಲೀಸ್​ ಇಲಾಖೆಯು ಸಹ ವಿಶಿಷ್ಟ ಪ್ರಯೋಗಗಳನ್ನು ಮಾಡುತ್ತ ಬಂದಿದೆ. ಸದ್ಯ ಹಾಡಿನ ಮೂಲಕ ವಿ.ವಿ. ಪುರಂ ಸಂಚಾರ ಠಾಣೆಯ ಎಎಸ್​ಐ ಉದ್ಬೂರು ಪಿ.ರಾಜು ಅವರು ಜನ ಜಾಗೃತಿ ಮೂಡಿಸುತ್ತಿದ್ದಾರೆ.

vv-puram-asi-singing-corona-awareness-song
ಎಎಸ್​ಐ ಉದ್ಬೂರು ಪಿ. ರಾಜು

By

Published : Apr 16, 2020, 11:10 AM IST

ಮೈಸೂರು: ಕೋವಿಡ್​​-19 ತಡೆಗೆ ಸರ್ಕಾರ ಸೇರಿದಂತೆ ಜನರು ಜಾಗೃತಿ ಮೂಡಿಸುತ್ತಿದ್ದು, ''ಕೊರೊನಾ ವಿರುದ್ಧ ಕನ್ನಡಿಗರ ಹೋರಾಟದ ಕಹಳೆ ಮೊಳಗಲಿ'' ಎಂಬ ಹಾಡಿನ ಮೂಲಕ ವಿ.ವಿ. ಪುರಂ ಸಂಚಾರ ಠಾಣೆಯ ಎಎಸ್​ಐ ಉದ್ಬೂರು ಪಿ.ರಾಜು ಅವರು ವಿಶಿಷ್ಟವಾಗಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ವೈದ್ಯರು, ಪೌರಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆ ಅನೇಕ ಸಂಘ ಸಂಸ್ಥೆಗಳು ಟೊಂಕ ನಿಂತಿವೆ. ಇದರೊಟ್ಟಿಗೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ.

ಹಾಡಿನ ಮೂಲಕ ಜಾಗೃತಿ ಮೂಡಿಸಿದ ಎಎಸ್​​ಐ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಡನ್ನು ಹಾಡಿರುವ ಎಎಸ್​ಐ ಉದ್ಬೂರು ಪಿ. ರಾಜು ಅವರು, ಅನಗತ್ಯವಾಗಿ ತಿರುಗಾಡದಿರಿ, ಪ್ರಧಾನಿ ಅವರ ಹೋರಾಟಕ್ಕೆ ಒಗ್ಗಟ್ಟಾಗಿ ಕೈ ಜೋಡಿಸೋಣ. ಕೊರೊನಾ ಕೊಲ್ಲಲು ಕೈಜೋಡಿಸಿ ಸಾಗೋಣವೆಂದು ಸ್ವರಚಿತ ಹಾಡನ್ನ ಹಾಡಿದ್ದಾರೆ.

ABOUT THE AUTHOR

...view details