ಮೈಸೂರು: ಬ್ರಾಹ್ಮಣನ ವೇಷದಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನಿಗೆ ಸಾರ್ವಜನಿಕರು ಸರಿಯಾಗಿ ಗೂಸಾ ಕೊಟ್ಟಿದ್ದಾರೆ.
ಕಳ್ಳತನ ಮಾಡಲು ಬ್ರಾಹ್ಮಣನ ವೇಷ: ಸಿಕ್ಕಿಬಿದ್ದ ಖದೀಮನಿಗೆ ಗೂಸಾ - mysure thief news
ಬ್ರಾಹ್ಮಣನ ವೇಷದಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನಿಗೆ ಸಾರ್ವಜನಿಕರು ಸರಿಯಾಗಿ ಗೂಸಾ ಕೊಟ್ಟಿದ್ದಾರೆ.
ಕಳ್ಳನಿಗೆ ಗೂಸಾ ಕೊಟ್ಟ ಸಾರ್ವಜನಿಕರು
ಭದ್ರಾವತಿಯ ನಿವಾಸಿ ಎಂದು ಹೇಳಿಕೊಂಡಿರುವ ಪ್ರವೀಣ ಎಂಬುವನಿಗೆ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಮೈಸೂರಿನ ವ್ಯಾಸರಾಯ ಮಠದ ಅರ್ಚಕ ವ್ಯಾಸತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.
ದೇವಸ್ಥಾನಕ್ಕೆ ಡೊನೇಷನ್ ಕೇಳುವ ನೆಪದಲ್ಲಿ ಪಂಚೆ, ಶೆಲ್ಯ, ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ. ನಂತರ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಎಂದು ತಿಳಿದುಬಂದಿದೆ. ಸಾರ್ವನಿಕರು ಈತನಿಗೆ ಥಳಿಸಿ ಈಗ ಕೆ.ಆರ್.ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.