ಮೈಸೂರು :ನಮ್ಮ ಸರ್ಕಾರ ಪಠ್ಯ ವಿಚಾರದಲ್ಲಿ ತಪ್ಪು ಮಾಡಿದ್ದರೆ ಅಂದು ಬಿಜೆಪಿಯವರು ಏಕೆ ಹೇಳಲಿಲ್ಲ. ನಮ್ಮ ತಪ್ಪು ಇದ್ದಾಗ ತಿದ್ದಿ ಸರಿಪಡಿಸಲು ಹೇಳಬಹುದಿತ್ತು. ಆದರೆ, ಬಿಜೆಪಿ ಸರ್ಕಾರ ಪಠ್ಯದ ಮೂಲಕ ಮಕ್ಕಳಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಂದು ಹೋಗಿದ್ದಕ್ಕೆ 70 ಕೋಟಿ ಖರ್ಚು ಮಾಡಲಾಗಿದೆ. ಮೋದಿ ಅವರು ಬಂದು ಹೋಗಿದ್ದರಿಂದ ಮೈಸೂರಿಗೆ ಏನೂ ಲಾಭವಾಗಿಲ್ಲ. ಕೇಂದ್ರ ಸರ್ಕಾರದಿಂದ ಮೈಸೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅನುದಾನ ಹರಿದು ಬಂದಿದೆ ಎಂದರು.