ಕರ್ನಾಟಕ

karnataka

ETV Bharat / city

ರಾಮಮಂದಿರ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ದೇಣಿಗೆ ನೀಡಿದ ಸುತ್ತೂರು ಮಠ, ಗಣಪತಿ ಆಶ್ರಮ

ಸರ್ಕಾರದ ಅನುದಾನ, ಶ್ರೀಮಂತರ ದುಡ್ಡಿನಿಂದ ಶ್ರೀರಾಮಮಂದಿರ ನಿರ್ಮಾಣವಾಗುವುದು ಬೇಡ‌ ಎಂಬುವುದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸೇರಿದಂತೆ ಪ್ರತಿಯೊಬ್ಬರ ಆಶಯ. ದೇಶದ ಪ್ರತಿಯೊಬ್ಬ ಭಾರತೀಯ ಹಿಂದೂ ಸಮರ್ಪಿಸುವ ನಿಧಿಯಿಂದ ಭವ್ಯ ಮಂದಿರ ನಿರ್ಮಾಣ ಆಗಬೇಕು ಎಂಬುವುದು ಎಲ್ಲರ ಆಶಯ..

suttur-math-ganapati-ashram-donated-10-lakh-each-to-build-the-ram-mandir
ಸುತ್ತೂರು ಮಠ ಗಣಪತಿ ಆಶ್ರಮ

By

Published : Jan 19, 2021, 4:53 PM IST

ಮೈಸೂರು :ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುತ್ತೂರು ಶ್ರೀಮಠದಿಂದ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮದಿಂದ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಠಾಧೀಶರು ಘೋಷಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಏರ್ಪಡಿಸಿದ್ದ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಸಮರ್ಪಣಾ ಅಭಿಯಾನ‌ ನಂತರ ಸಮಾವೇಶದಲ್ಲಿ ಸುತ್ತೂರು ಮಠದ ಪೀಠಾಧಿಪತಿ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು 10 ಲಕ್ಷ ರೂ‌. ಮತ್ತು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಕೂಡ 10ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ದೇಣಿಗೆ ನೀಡಿದ ಸುತ್ತೂರು ಮಠ, ಗಣಪತಿ ಆಶ್ರಮ

ಸರ್ಕಾರದ ಅನುದಾನ, ಶ್ರೀಮಂತರ ದುಡ್ಡಿನಿಂದ ಶ್ರೀರಾಮಮಂದಿರ ನಿರ್ಮಾಣವಾಗುವುದು ಬೇಡ‌ ಎಂಬುವುದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸೇರಿದಂತೆ ಪ್ರತಿಯೊಬ್ಬರ ಆಶಯ. ದೇಶದ ಪ್ರತಿಯೊಬ್ಬ ಭಾರತೀಯ ಹಿಂದೂ ಸಮರ್ಪಿಸುವ ನಿಧಿಯಿಂದ ಭವ್ಯ ಮಂದಿರ ನಿರ್ಮಾಣ ಆಗಬೇಕು ಎಂಬುವುದು ಎಲ್ಲರ ಆಶಯ. ಇದನ್ನು ಪೂರೈಸಲು ಎಲ್ಲರೂ ಕೈ ಜೋಡಿಸೋಣ ಎಂದು ಸಂತರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

ಪ್ರತಿ ಹಳ್ಳಿಗೂ ನಿಧಿ ಸಮರ್ಪಣಾ ಅಭಿಯಾನ ಬಂದಂತಹ ಸಂದರ್ಭದಲ್ಲಿ ರಾಯಭಾಗದ ಮಠಾಧೀಶರು ಜನರ ಬಳಿ ತೆರಳಿ ನಿಧಿ ಸಂಗ್ರಹಿಸಿ ಕೊಡಬೇಕು ಎಂಬ ಅಭಿಪ್ರಾಯವು ವ್ಯಕ್ತವಾಯಿತು.

ABOUT THE AUTHOR

...view details