ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ, ಸರ್ಕಲ್‍ಗಳಲ್ಲಿ ಗೋಡೆ, ಮರಗಳಿಗೆ ಹಾಗೂ ಇತರೆ ಯಾವುದೇ ಸ್ಥಳಗಳಲ್ಲಿ ಯಾವುದೇ ಸಂಸ್ಥೆಗಳು, ವ್ಯಕ್ತಿಗಳು, ಕಂಪನಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಬ್ಯಾನರ್ಸ್, ಪ್ಲೆಕ್ಸ್, ಬಾವುಟ, ಬಂಟಿಂಗ್ಸ್ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಖಾಸಗಿ ವ್ಯಕ್ತಿಗಳು, ಧಾರ್ಮಿಕ ಸಂಸ್ಥೆಗಳು, ಇತರೆ ಸಂಘಟನೆಗಳು ಮೈಸೂರು ಮಹಾನಗರ ಪಾಲಿಕೆ ಆಸ್ತಿಗಳ ಮೇಲೆ, ಸರ್ಕಾರಿ, ಖಾಸಗಿ, ಸಾರ್ವಜನಿಕರ ಆಸ್ತಿಗಳ ಮೇಲೆ, ವಿದ್ಯುತ್ ಕಂಬಗಳು, ಮೀಡಿಯನ್ಸ್, ಡಿವೈಡರ್ಸ್, ಕಲ್ವಟ್ರ್ಸ್, ರಸ್ತೆ ಬದಿ ಮರಗಳು, ಸರ್ಕಲ್‍ಗಳಲ್ಲಿ ಹುಟ್ಟಿದ ಹಬ್ಬದ ಶುಭಾಶಯ ಕೋರುವ ಪ್ಲೆಕ್ಸ್ ಗಳು, ಶ್ರದ್ಧಾಂಜಲಿ ಪ್ಲೆಕ್ಸ್, ಬ್ಯಾನರ್, ಬಾವುಟ, ಬಂಟಿಂಗ್ಗಳನ್ನು ಅಳವಡಿಸುತ್ತಿದ್ದು, ಸಾರ್ವಜನಿಕ ಪ್ರದೇಶಗಳನ್ನು ವಿರೂಪಗೊಳಿಸುತ್ತಿರುವುದು ಕಂಡು ಬಂದಿರುತ್ತದೆ. ಈ ರೀತಿ ಸಾರ್ವಜನಿಕರ ಆಸ್ತಿಗಳನ್ನು ವಿರೂಪಗೊಳಿಸುವುದು ಕರ್ನಾಟಕ ಮುಕ್ತ ಸ್ಥಳಗಳು (ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ) ಆಕ್ಟ್-1981ರ ಕಾಯ್ದೆ ಕಲಂ 3ರನ್ವಯ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧವಾಗುತ್ತದೆ.
ಓದಿ-ಬಿಎಸ್ವೈ ನಾಯಕತ್ವಕ್ಕೆ ಅಮಿತ್ ಶಾ ಟಾನಿಕ್.. ಅತೃಪ್ತರ ಬಾಯಿಗೆ ಬೀಗ ಹಾಕಿಸಲು 'ಯಶ'ಯೂರಪ್ಪ!!
ನಿಯಮ ಉಲ್ಲಂಘಿಸಿದರೆ ಆರು ತಿಂಗಳು ಜೈಲು ಶಿಕ್ಷೆ 1000 ರೂ. ದಂಡ