ಕರ್ನಾಟಕ

karnataka

ETV Bharat / city

ಬೈಕ್​ಗೆ ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ದ್ವಿಚಕ್ರ ವಾಹನ ಸವಾರ ಸಾವು - bike and bus collide

ಮೈಸೂರು ನಗರದ ಸರ್ಕಾರಿ ಅಥಿತಿ ಗೃಹ ಸಿಗ್ನಲ್ ಜಂಕ್ಷನ್ ಬಳಿ ಬೈಕ್​ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿದ್ದಾರೆ.

road accident
ಅಥಿತಿಗೃಹ ಸಿಗ್ನಲ್ ಜಂಕ್ಷನ್ ಬಳಿ ರಸ್ತೆ ಅಪಘಾತ

By

Published : Nov 26, 2020, 11:23 AM IST

ಮೈಸೂರು: ಬೈಕ್​ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಸರ್ಕಾರಿ ಅಥಿತಿಗೃಹ ಸಿಗ್ನಲ್ ಜಂಕ್ಷನ್ ಬಳಿ ನಡೆದಿದೆ.

ಅಥಿತಿಗೃಹ ಸಿಗ್ನಲ್ ಜಂಕ್ಷನ್ ಬಳಿ ರಸ್ತೆ ಅಪಘಾತ

ಹಳೇ ಕೆಸರೆ ನಿವಾಸಿ ಆನಂದ್ (28) ಮೃತಪಟ್ಟ ವ್ಯಕ್ತಿ. ಈತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬೈಕ್​ನಲ್ಲಿ ಕೆಎಸ್​ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಕಡೆಯಿಂದ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಖಾಸಗಿ ಬಸ್, ಬೈಕ್​ಗೆ ಡಿಕ್ಕಿಯಾಗಿದೆ. ಪರಿಣಾಮ ಆನಂದ್ ಅವರ ತಲೆ ಮೇಲೆ ಬಸ್​ನ ಹಿಂಬದಿ ಚಕ್ರ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕಬ್ಬು ತುಂಬಿದ ಲಾರಿಗೆ ಬುಲೆರೊ ಪಿಕ್​ಅಪ್​ ವಾಹನ ಢಿಕ್ಕಿ : ಓರ್ವ ಸ್ಥಳದಲ್ಲೇ ಸಾವು

ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details