ಕರ್ನಾಟಕ

karnataka

ETV Bharat / city

ಕೋವಿಡ್ ಸೆಲ್ಫ್ ಟೆಸ್ಟ್ ಕಿಟ್ ಸಂಶೋಧನೆಯ ಬಗ್ಗೆ ಪ್ರೊ.ಕೆ.ಎಸ್.ರಂಗಪ್ಪ ಮಾಹಿತಿ

ಕೋವಿಡ್ ಸೆಲ್ಫ್ ಟೆಸ್ಟ್ ಕಿಟ್ ಸಂಶೋಧನೆಯ ಬಗ್ಗೆ ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಮಾಹಿತಿ ನೀಡಿದ್ದಾರೆ.

Mysore
ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ

By

Published : Jun 7, 2021, 2:27 PM IST

Updated : Jun 7, 2021, 3:18 PM IST

ಮೈಸೂರು: ಕೋವಿಡ್ ವೈರಸ್ ಇರುವ ಭೀತಿ ಕಾಡುತ್ತಿದ್ದು, ಹೊರಗೆ ಹೋಗಿ ಪರೀಕ್ಷಿಸಲು ಇನ್ನು ಸರದಿ ಸಾಲಲ್ಲಿ ನಿಲ್ಲಬೇಕಿಲ್ಲ. ಮನೆಯಲ್ಲೇ ದೇಹದಲ್ಲಿ ಕೋವಿಡ್ ವೈರಸ್ ಇದೆಯಾ ಎಂದು ಪತ್ತೆ ಹಚ್ಚುವ ಕೋವಿಡ್ ಟೆಸ್ಟ್ ಕಿಟ್ ಅ​ನ್ನು ಮೈಸೂರಿನ ವಿಜ್ಞಾನಿಗಳ ತಂಡ ಕಂಡುಹಿಡಿದಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ವಿವರಿಸಿದ್ದಾರೆ.

ಕೋವಿಡ್ ಸೆಲ್ಫ್ ಟೆಸ್ಟ್ ಕಿಟ್ ಸಂಶೋಧನೆಯ ಬಗ್ಗೆ ಪ್ರೊ.ಕೆ.ಎಸ್.ರಂಗಪ್ಪ ಮಾಹಿತಿ

ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರೊ.ರಂಗಪ್ಪ, ನಾವು ಮನೆಯಲ್ಲೇ ಹೇಗೆ ಶುಗರ್, ಬಿಪಿ ಮತ್ತು ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಕೊಳ್ಳುತ್ತೇವೆಯೋ ಹಾಗೆಯೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ಈ ಕೋವಿಡ್ ಟೆಸ್ಟ್ ಕಿಟ್ ಬೆಲೆ ಕೇವಲ 100 ರೂಪಾಯಿಯಾಗಿದ್ದು, ಕೇವಲ 5 ನಿಮಿಷದಲ್ಲಿ ಪರೀಕ್ಷೆ ಮಾಡಿಕೊಳ್ಳಬಹುದು.

ಈ ಟೆಸ್ಟ್​ನ ಪರೀಕ್ಷೆ ಶೇಕಡ 90ರಷ್ಟು ಯಶಸ್ವಿಯಾಗಿದ್ದು, ಐಸಿಎಂಆರ್​ಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ಬಂದ ತಕ್ಷಣ ಇದರ ಮಾರುಕಟ್ಟೆಯನ್ನು ಹೈದರಾಬಾದ್​ನ ಲಾರ್ವಿನ್ ಬಯೋಲಾಜಿಕ್ಸ್ ನೋಡಿಕೊಳ್ಳುತ್ತದೆ ಎಂದು ವಿವರಿಸಿದರು‌.

ಇದನ್ನೂ ಓದಿ:ಸಿದ್ದರಾಮಯ್ಯ ಸಂಪೂರ್ಣ ಗುಣಮುಖ; ಆಸ್ಪತ್ರೆಯಿಂದ ಡಿಸ್ಚಾರ್ಜ್

Last Updated : Jun 7, 2021, 3:18 PM IST

ABOUT THE AUTHOR

...view details