ಕರ್ನಾಟಕ

karnataka

ETV Bharat / city

ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್​.. ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೈಸೂರು ವಿಮಾನ ನಿಲ್ದಾಣದಕ್ಕೆ ಬಂದಿಳಿದಿದ್ದು, ಸಿಎಂ ಬೊಮ್ಮಾಯಿ ಸ್ವಾಗತ ಕೋರಿದ್ದಾರೆ.

president Ram Nath Kovind came to mysore
ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್

By

Published : Oct 7, 2021, 12:03 PM IST

ಮೈಸೂರು: ನಗರಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ರಾಷ್ರ್ರಪತಿ ಅವರು ಇಂದು ಚಾಮರಾಜನಗರ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಲು ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಈ ವೇಳೆ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಾಮರಾಜನಗರ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಮೈಸೂರು ಮೇಯರ್ ಸುನಂದಾ ಪಾಲನೇತ್ರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಚಾಮರಾಜನಗರಕ್ಕೆ ರಾಷ್ಟ್ರಪತಿ: 20 ಕಿ.ಮೀ ಪ್ರಕೃತಿ ಸೊಬಗು ಸವಿಯಲಿದೆ ಪ್ರಥಮ ಪ್ರಜೆಯ ಕುಟುಂಬ

ರಾಷ್ಟ್ರಪತಿ ಮೈಸೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಚಾಮರಾಜನಗರಕ್ಕೆ ತೆರಳಿ‌ ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ.

ಚಾಮರಾಜನಗರಕ್ಕೆ ಭೇಟಿ-ಸಕಲ ಸಿದ್ಧತೆ:

ಈಗಾಗಲೇ ರಾಷ್ಟ್ರಪತಿ ಆಗಮನಕ್ಕೆ ಚಾಮರಾಜನಗರ ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದ್ದು, ಬಿಳಿಗಿರಿರಂಗನ ಬೆಟ್ಟ ದೇಗುಲದಲ್ಲಿ ಪೂಜೆ ಮಾಡಲು ಓರ್ವ ಅರ್ಚಕರಿಗಷ್ಟೇ ಅವಕಾಶ ನೀಡಲಾಗಿದೆ. ದೇವಾಲಯ ಆವರಣವನ್ನು ಸಂಪೂರ್ಣ ಹೂವಿನಿಂದ ಸಿಂಗರಿಸವಾಗಿದೆ. ತಪ್ಪಲಿನಿಂದ ದೇಗುಲದವರೆಗೆ ಕಾರು ಸಂಚರಿಸಲು ಪಿಡಬ್ಲ್ಯೂಡಿ ತಾತ್ಕಾಲಿಕ ರ್ಯಾಂಪ್ ನಿರ್ಮಿಸಿದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ರಾಷ್ಟ್ರಪತಿ ಕುಟುಂಬ ಪೂಜೆ ಸಲ್ಲಿಸಿದ ಬಳಿಕ ಮೆಡಿಕಲ್ ಕಾಲೇಜಿನಲ್ಲಿ ಭೋಜನ ಸವಿದು, ಮಧ್ಯಾಹ್ನ 3.30 ರಿಂದ 4.30 ರವರೆಗೆ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾಡು ದಾರಿಯುದ್ದಕ್ಕೂ ಪೊಲೀಸರನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ.

ABOUT THE AUTHOR

...view details