ಕರ್ನಾಟಕ

karnataka

ಪಠ್ಯದಿಂದ ಅಧ್ಯಾಯ ಕೈಬಿಡಿ ಎನ್ನುವುದು ಕಾಂಗ್ರೆಸ್‌ನಿಂದ ಉಪಕೃತರಾದ ಕೆಲವರ ನಾಟಕ: ಪ್ರತಾಪ್​ ಸಿಂಹ

By

Published : Jun 1, 2022, 2:07 PM IST

ಪಠ್ಯದಿಂದ ಅಧ್ಯಾಯ ಕೈ ಬಿಡಬೇಕು ಎಂಬ ಲೇಖಕರ ಪತ್ರಗಳ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್‌ ಸಿಂಹ , ಕೆಲವರು ಕೈ ಬಿಟ್ಟ ಮೇಲೆ ನಮ್ಮ ಪಠ್ಯ ಕೈ ಬಿಡಿ ಅಂತಿದ್ದಾರೆ. ಕಾಂಗ್ರೆಸ್ ಪರ ನಿಲ್ಲಲು ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್​ನವರಿಂದ ಉಪಕೃತರಾದ ಕೆಲವರ ನಾಟಕ ಎಂದು ವಾಗ್ದಾಳಿ ನಡೆಸಿದರು.

ಸಂಸದ ಪ್ರತಾಪ್‌ ಸಿಂಹ
ಸಂಸದ ಪ್ರತಾಪ್‌ ಸಿಂಹ

ಮೈಸೂರು: ಪಠ್ಯದಿಂದ ತಮ್ಮ ಅಧ್ಯಾಯ ಕೈ ಬಿಡಬೇಕು ಎಂದು ಕೆಲ ಲೇಖಕರು ಪತ್ರಗಳನ್ನು ಬರೆದಿರುವ ವಿಚಾರವಾಗಿ ಮೈಸೂರು - ಕೊಡಗು ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯೆ ನೀಡಿದ್ದು, ಇದು ಕಾಂಗ್ರೆಸ್​ನವರಿಂದ ಉಪಕೃತರಾದ ಕೆಲವರ ನಾಟಕ ಎಂದು ವಾಗ್ದಾಳಿ ನಡೆಸಿದರು.

ಪಠ್ಯದಿಂದ ಅಧ್ಯಯನ ಕೈ ಬಿಡಬೇಕು ಎಂಬ ಲೇಖಕರ ಪತ್ರಗಳ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಭಗತ್ ಸಿಂಗ್ ಹಾಗೂ ನಾರಾಯಣ್ ಗುರು ಪಠ್ಯ ಕೈಬಿಟ್ಟ ವಿಚಾರವಾಗಿ ಚರ್ಚೆ ನಡೆಯಲಿ. ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದರೂ ಬರಲಿಲ್ಲ. ಇವರು ವಿಚಾರ ಹೀನರಾಗಿಲ್ಲದಿದ್ದರೆ ಚರ್ಚೆಗೆ ಬರುತ್ತಿದ್ದರು ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್‌ ಸಿಂಹ

ಕುವೆಂಪು ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟಿರುವುದು ಬಿಜೆಪಿ. ಸದಾನಂದಗೌಡರು ಸಿಎಂ ಆಗಿದ್ದಾಗ ನಾಡಗೀತೆ ಆಯ್ತು. ಮೋದಿ ಅಧಿಕಾರಕ್ಕೆ ಬಂದಾಗ ಪ್ರಶಸ್ತಿ ವಾಪಸ್ ನೀಡಿದರು. ಇದೀಗ ಪಠ್ಯದ ಲೇಖನ ವಾಪಸ್​ ಕುರಿತು ಪತ್ರ ಬರೆಯುತ್ತಿದ್ದಾರೆ. ಕೆಲವರು ಕೈ ಬಿಟ್ಟ ಮೇಲೆ ನಮ್ಮ ಪಠ್ಯ ಕೈ ಬಿಡಿ ಅಂತಿದ್ದಾರೆ. ದೇವನೂರು ಅವರ ಪಠ್ಯವನ್ನು ಹಿಂದೆ ಯುವಕರು ತುಂಬಾ ಓದಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ ಕೃಷಿ‌ ನಿಂತು 15 ವರ್ಷ ಆಗಿದೆ. ಕಾಂಗ್ರೆಸ್ ಪರ ನಿಲ್ಲಲು ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರೆಲ್ಲಾ ಅದ್ಭುತ ಸಾಹಿತಿಗಳು ಅಂದುಕೊಳ್ಳುವುದು ಬೇಡ ಎಂದು ಹೇಳಿದರು.

ಇದನ್ನೂ ಓದಿ:RSS ಆಶೀರ್ವಾದದಿಂದ ಬಿಜೆಪಿ ಪಕ್ಷ ನಡೆಯುತ್ತಿದೆ: ಮುರುಗೇಶ್​ ನಿರಾಣಿ

ABOUT THE AUTHOR

...view details