ಕರ್ನಾಟಕ

karnataka

ETV Bharat / city

ಉಕ್ರೇನ್​ನಲ್ಲಿ ಸಿಲುಕಿರುವ ಮಗನನ್ನು ನೆನೆದು ಕಣ್ಣೀರು ಹಾಕಿದ ಪೋಷಕರು

ಮೈಸೂರಿನಿಂದ ಉಕ್ರೇನ್​​ಗೆ ತೆರಳಿದ ನಾಗರಿಕರ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತ ನೀಡಿರುವ ದೂರವಾಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ..

parents worry about their children who stuck in Ukraine
ಉಕ್ರೇನ್​ನಲ್ಲಿ ಸಿಲುಕಿರುವ ಮಗನನ್ನು ನೆನೆದು ಕಣ್ಣೀರು ಹಾಕಿದ ಪೋಷಕರು

By

Published : Feb 25, 2022, 4:00 PM IST

ಮೈಸೂರು: ಉಕ್ರೇನ್‌ನಲ್ಲಿ ಓದಲು ತೆರಳಿರುವ ತಮ್ಮ ಮಗ ಸಂಕಷ್ಟಕ್ಕೆ ಸಿಲುಕಿದ್ದರಿಂದಾಗಿ ಪೋಷಕರು ಕಣ್ಣೀರು ಹಾಕಿದ್ದಾರೆ. ಮೈಸೂರಿನ ಟಿ.ಕೆ.ಲೇಔಟ್​ನ ನಿವಾಸಿಗಳಾದ ಪುಟ್ಟಮಾದೇಗೌಡ ಹಾಗೂ ಪ್ರಮೀಳಾ ರಾಣಿ ಪುತ್ರ ಪಿ.ಗಣೇಶ್ ಅವರು ಉಕ್ರೇನ್​​​ನ ಜಪ್ರೋಸಿಯಾ ಸಿಟಿಯಲ್ಲಿದ್ದು, ಪೋಷಕರು ಆತಂಕದಲ್ಲಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿರುವ ಮಗನನ್ನು ನೆನೆದು ಕಣ್ಣೀರು ಹಾಕಿದ ಪೋಷಕರು..

ಐದನೇ‌ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಗಣೇಶ್​ನ ಆಗಮನದ ನಿರೀಕ್ಷೆಯಲ್ಲಿ ಪೋಷಕರಿದ್ದರು. ಆದ್ರೀಗ ಪರಿಸ್ಥಿತಿ ಎಲ್ಲರನ್ನೂ ಆತಂಕಕ್ಕೆ ತಳ್ಳಿದೆ. ನಿನ್ನೆ ರಾತ್ರಿ 11ಗಂಟೆ ವೇಳೆಯಲ್ಲಿ ಪೋಷಕರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು, ಸದ್ಯ ಹಾಸ್ಟೆಲ್​ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಪುತ್ರ ಮಾಹಿತಿ ನೀಡಿದ್ದಾನೆ ಎಂದು ಪೋಷಕರು ತಿಳಿಸಿದರು. ‌

ಜಿಲ್ಲಾಡಳಿತದಿಂದ ಕ್ರಮ :ಮೈಸೂರಿನಿಂದ ಉಕ್ರೇನ್​​ಗೆ ತೆರಳಿದ ನಾಗರಿಕರ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತ ನೀಡಿರುವ ದೂರವಾಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ:ಉಕ್ರೇನ್​ನಲ್ಲಿ ಸಿಲುಕಿದ ಆನೇಕಲ್​ ವಿದ್ಯಾರ್ಥಿ: ಪೋಷಕರಿಗೆ ಧೈರ್ಯ ತುಂಬಿದ ಶಾಸಕ ಬಿ ಶಿವಣ್ಣ

ವಿವಿಧ ಉದ್ದೇಶಗಳಿಂದ ಉಕ್ರೇನ್​ಗೆ ತೆರಳಿರುವ ಮೈಸೂರು ಜಿಲ್ಲೆಯವರ ಮಾಹಿತಿಯನ್ನು ಸಂಬಂಧಿಸಿದವರು ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂ.ಸಂ. 0821-2423800 ಅಥವಾ 1077 ಅಥವಾ ಜಿಲ್ಲಾ ವಿಪತ್ತು ತಜ್ಞರಾದ ಸುಧೀರ್ ಅವರ ಮೊ‌.ಸಂ. 9845852481ಗೆ ಸಂಪರ್ಕಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ABOUT THE AUTHOR

...view details