ಮೈಸೂರು: ನಮ್ಮದು ಒಂಥರಾ ಸಮ್ಮಿಶ್ರ ಸರ್ಕಾರವೇ. ಹಾಗಾಗಿ ಯಾವಾಗಲೂ ಏನೇ ಆಗಬೇಕಾದರು ಚಾಮುಂಡಿ ತಾಯಿಯ ಆಶೀರ್ವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ.
ನಮ್ಮದು ಒಂಥರಾ ಸಮ್ಮಿಶ್ರ ಸರ್ಕಾರವೇ: ಸಚಿವ ವಿ. ಸೋಮಣ್ಣ
ಈಗ ರಾಜ್ಯದಲ್ಲಿರುವುದು ಒಂಥರಾ ಸಮ್ಮಿಶ್ರ ಸರ್ಕಾರವೇ. ಸದ್ಯ 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳಿದ್ದು, ಯಾರಿಗೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಯೋಚಿಸುತ್ತಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇಂದು ಜಿಲ್ಲೆಯ ವೀರನಹೊಸಹಳ್ಳಿಯಲ್ಲಿ ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ. ಸೋಮಣ್ಣ, ಇಂತಹ ಪ್ರವಾಹದ ಪರಿಸ್ಥಿತಿಯಲ್ಲೂ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕಾದ್ದು ನಮ್ಮ ಕರ್ತವ್ಯ. ಇಲ್ಲಿ ಯಾರು, ಎತ್ತ ಎನ್ನುವುದಕ್ಕಿಂತ ನಮ್ಮೆಲ್ಲರ ನಾಯಕರು ಯಡಿಯೂರಪ್ಪ ದಸರಾಗೆ 18 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದರು.
ಈಗ ರಾಜ್ಯದಲ್ಲಿ ಇರುವುದು ಒಂಥರಾ ಸಮ್ಮಿಶ್ರ ಸರ್ಕಾರವೇ. 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳು ಖಾಲಿ ಇದ್ದು, ಯಾರಿಗೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಯೋಚಿಸುತ್ತಾರೆ ಎಂದು ಸಚಿವ ಸೋಮಣ್ಣ ಹೇಳಿದ್ರು.