ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಹತ್ತಿರವಾಗುತ್ತಿದ್ದಂತೆ, ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಇಂದಿನಿಂದ ಭಾರ ಹೊರುವ ತಾಲೀಮು ಆರಂಭಿಸಲಾಗಿದೆ.
ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಇಂದಿನಿಂದ ಭಾರ ಹೊರುವ ತಾಲೀಮು.. - ಅಭಿಮನ್ಯು ಆನೆ
ಜಂಬೂಸವಾರಿ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು, ಇದೇ ಮೊದಲ ಬಾರಿಗೆ ಅಭಿಮನ್ಯು ಆನೆಗೆ ಅದೃಷ್ಟ ಒಲಿದು ಬಂದಿದೆ. ಇಂದು 300 ಕೆಜಿಯಷ್ಟು ಮರಳು ಮೂಟೆಗಳನ್ನು ಹೊರಿಸಿ ತಾಲೀಮು ನಡೆಸಲಾಗಿದೆ.
ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಇಂದಿನಿಂದ ಭಾರ ಹೊರುವ ತಾಲೀಮು..
ಕೊರೊನಾ ಹಿನ್ನೆಲೆ ಅರಮನೆ ಆವರಣದಲ್ಲಿಯೇ ಮರಳು ಮೂಟೆ ಹೊರಿಸಿ ತಾಲೀಮು ಆರಂಭಿಸಲಾಗಿದ್ದು, ಅಭಿಮನ್ಯು ಆನೆಗೆ ಗೋಪಿ, ವಿಕ್ರಮ, ಕಾವೇರಿ, ವಿಜಯ ಸಾಥ್ ನೀಡಿದವು.
ಜಂಬೂಸವಾರಿ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು, ಇದೇ ಮೊದಲ ಬಾರಿಗೆ ಅಭಿಮನ್ಯುವಿಗೆ ಅದೃಷ್ಟ ಒಲಿದು ಬಂದಿದೆ. ಇಂದು 300 ಕೆಜಿಯಷ್ಟು ಮರಳು ಮೂಟೆಗಳನ್ನು ಹೊರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಂಬಾರಿ ಹೊರುವ ಹಾಗೇ ಅಭಿಮನ್ಯುವನ್ನು ತಯಾರುಗೊಳಿಸಲಾಗುತ್ತದೆ.