ಮೈಸೂರು: ಕೋವಿಡ್ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ನಿಭಾಯಿಸಲು ಪಾಲಿಕೆಯು ಪ್ರತಿನಿತ್ಯ ಕಟ್ಟಿಗೆಯಿಂದ ಸಾಮೂಹಿಕ ಅಂತ್ಯಕ್ರಿಯೆ ನಡೆಸುತ್ತಿದೆ.
ಕಟ್ಟಿಗೆಯಿಂದ ಸಾಮೂಹಿಕ ಅಂತ್ಯಕ್ರಿಯೆ ಓದಿ: ಸೋಂಕಿತರ ಅಂತ್ಯಸಂಸ್ಕಾರ - ಐವರಿಗಷ್ಟೇ ಅವಕಾಶ: ಪಿಡಿಒಗಳಿಗೆ ಗುಂಡ್ಲುಪೇಟೆ ತಹಶೀಲ್ದಾರ್ ಸೂಚನೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದ್ದು, ಇಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಎರಡು ಅನಿಲ ಚಿತಾಗಾರ, ಒಂದು ವಿದ್ಯುತ್ ಚಿತಾಗಾರ ಇದೆ.
ಇಲ್ಲಿ ಶವ ಸಂಸ್ಕಾರಕ್ಕೆ ಒತ್ತಡ ಹೆಚ್ಚಿರುವ ಕಾರಣ, ವಿಜಯನಗರದ ಒಂದು ಕಡೆ ಹಾಗೂ ಬನ್ನಿಮಂಟಪದ ಜೋಡಿ ತೆಂಗಿನಮರದ ಕಟ್ಟಿಗೆ ಚಿತಾಗಾರದಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಕಟ್ಟಿಗೆಯಿಂದ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಮೈಸೂರಿನಲ್ಲಿ ಕೋವಿಡ್ ಎರಡನೇ ಅಲೆಯ ಸಾವಿನ ಭೀಕರತೆಯನ್ನು ಸಾಮೂಹಿಕ ಕಟ್ಟಿಗೆ ಅಂತ್ಯಕ್ರಿಯೆಯಲ್ಲಿ ನೋಡಬಹುದಾಗಿದೆ.
ಈ ಬಗ್ಗೆ ಪಾಲಿಕೆಯ ಅಧಿಕಾರಿ ಅನಿಲ್ ಕ್ರೀಷ್ಟ ಹೇಳಿದ್ದೇನು..?
ನಗರದಲ್ಲಿ ಕೋವಿಡ್ ನಿಂದ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ವಿದ್ಯುತ್ ಚಿತಾಗಾರ ಹಾಗೂ ಅನಿಲ ಚಿತಾಗಾರಗಳಲ್ಲಿ ಒತ್ತಡ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಕಟ್ಟಿಗೆಯಿಂದ ಶವ ಸಂಸ್ಕಾರ ನಡೆಸಲಾಗುತ್ತಿದ್ದು, ಸತ್ತ ವ್ಯಕ್ತಿಗಳ ಅಂತ್ಯಕ್ರಿಯೆಗೆ ತೊಂದರೆಯಾಗದಿರಲಿ ಎಂದು ಈ ಕ್ರಮ ಅನುಸರಿಸುತ್ತಿದ್ದೇವೆ ಎಂದು ಪಾಲಿಕೆ ಅಧಿಕಾರಿ ಅನಿಲ್ ಕ್ರೀಷ್ಟ್ ಹೇಳಿದ್ದಾರೆ.
ಒಂದು ಬಾರಿಗೆ ಕಟ್ಟಿಗೆಯಿಂದ 9 ದೇಹಗಳನ್ನು ಸುಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಪೂಜೆ ಸಲ್ಲಿಸಲು 4 ಜನರಿಗೆ ಪಿಪಿಇ ಕಿಟ್ ಕೊಟ್ಟು ಈ ವ್ಯವಸ್ಥೆ ಮಾಡಲಾಗಿದೆ. ಯಾವುದೇ ತೊಂದರೆಯಾಗದ ರೀತಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ಕಟ್ಟಿಗೆಯಿಂದ ಅಂತ್ಯಕ್ರಿಯೆ ನೇರವೇರಿಸಲಾಗುತ್ತಿದೆ ಎಂದು ಅನಿಲ್ ಕ್ರೀಷ್ಟ್ ವಿವರಿಸಿದರು.