ಕರ್ನಾಟಕ

karnataka

ETV Bharat / city

ಮೈಸೂರು ಪಾಲಿಕೆಯ ಕೋವಿಡ್ ಟೆಲಿ ಕೇರ್ ಸೆಂಟರ್ ರಾಜ್ಯಕ್ಕೇ ಮಾದರಿ.. ಏನಿದರ ವಿಶೇಷ? - ಕೋವಿಡ್ ಪಾಸಿಟಿವ್ ಬಂದವರಿಗೆ ಪೋನ್ ಮೂಲಕವೇ ಧೈರ್ಯ

ಮೈಸೂರು ಮಹಾನಗರ ಪಾಲಿಕೆ 64 ಸ್ವಯಂ ಸೇವಾ ಸಂಸ್ಥೆಗಳ ಸಹಾಯೋಗದೊಂದಿಗೆ ಕೋವಿಡ್ ಸೋಂಕಿತರಿಗೆ ಉಂಟಾಗುವ ಆತಂಕ, ಸಮಸ್ಯೆ ಮತ್ತು ಅವರಿಗೆ ಬೇಕಾದ ಚಿಕಿತ್ಸೆ, ತುರ್ತು ಸಲಹೆ ಸೇರಿದಂತೆ ಹಲವಾರು ಆರೋಗ್ಯಕರ ಸಲಹೆಯನ್ನು ನೀಡಲು ಕೋವಿಡ್ ಟೆಲಿ ಕೇರ್ ಸೆಂಟರ್ ಅನ್ನು ಆರಂಭಿಸಿದೆ.

mysore-covid-tele-care-center-modeled-on-the-state
ಕೋವಿಡ್ ಟೆಲಿ ಕೇರ್ ಸೆಂಟರ್

By

Published : May 22, 2021, 5:45 PM IST

ಮೈಸೂರು: ಕೋವಿಡ್ ಪಾಸಿಟಿವ್ ಬಂದವರಿಗೆ ಪೋನ್ ಮೂಲಕವೇ ಧೈರ್ಯ ಹಾಗೂ ಸಲಹೆಯನ್ನು ನೀಡುವ ಕೋವಿಡ್ ಟೆಲಿ ಕೇರ್ ಸೆಂಟರ್ ಅನ್ನು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮೈಸೂರು ಮಹಾನಗರ ಪಾಲಿಕೆ ಆರಂಭಿಸಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ.

ಕೋವಿಡ್ ಟೆಲಿ ಕೇರ್ ಸೆಂಟರ್

ಓದಿ: ಮದ್ಯಪಾನ ಮಾಡಿ ಹೆತ್ತಮ್ಮನ ಕಾಡಿನಲ್ಲಿ ಬಿಟ್ಟ ಬಂದ ಮಗ.. ಮುಂದೇನಾಯ್ತು!?

ಮೈಸೂರು ಮಹಾನಗರ ಪಾಲಿಕೆ 64 ಸ್ವಯಂ ಸೇವಾ ಸಂಸ್ಥೆಗಳ ಸಹಾಯೋಗದೊಂದಿಗೆ ಕೋವಿಡ್ ಸೋಂಕಿತರಿಗೆ ಉಂಟಾಗುವ ಆತಂಕ, ಸಮಸ್ಯೆ ಮತ್ತು ಅವರಿಗೆ ಬೇಕಾದ ಚಿಕಿತ್ಸೆ, ತುರ್ತು ಸಲಹೆ ಸೇರಿದಂತೆ ಹಲವಾರು ಆರೋಗ್ಯಕರ ಸಲಹೆಯನ್ನು ನೀಡಲು ಕೋವಿಡ್ ಟೆಲಿ ಕೇರ್ ಸೆಂಟರ್ ಆರಂಭಿಸಿದೆ.

ಇದು ರಾಜ್ಯದಲ್ಲೇ ಮಾದರಿ ಕೆಲಸವಾಗಿದ್ದು, ಇದರಲ್ಲಿ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಡಾಕ್ಟರುಗಳು ಸ್ವ-ಇಚ್ಚೆಯಿಂದ ಉಚಿತವಾಗಿ ಸಲಹೆ ನೀಡುತ್ತಾರೆ. ಟೆಲಿ ಕೇರ್ ಸೆಂಟರಿನಲ್ಲಿ 35 ಜನ ಮೈಸೂರು ಡಾಕ್ಟರುಗಳು, 35 ಜನ ಇಂಗ್ಲೆಂಡಿನಲ್ಲಿ‌ ಕೆಲಸ ಮಾಡುತ್ತಿರುವ ಕನ್ನಡ ಬರುವ ವೈದ್ಯರು ಕೋವಿಡ್ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಕಳೆದ 10 ದಿನಗಳಿಂದ 800 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಆರೋಗ್ಯ ಹಾಗೂ ಕೋವಿಡ್​ಗೆ ಸಂಬಂಧಿಸಿದ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.

ಇನ್ನೂ ಮಕ್ಕಳಿಗೆ ಕೋವಿಡ್ ಬಂದರೆ ಸಲಹೆ ನೀಡುವ ಡಾಕ್ಟರ್, ಮಕ್ಕಳಿಗೆ ನೇರವಾಗಿ ಚಿಕಿತ್ಸೆ ನೀಡುತ್ತಾರೆ. ಕೋವಿಡ್ ಚಿಕಿತ್ಸೆಯಲ್ಲಿ ಇರುವ ವಾರಿಯರ್ಸ್​ಗಳು ಆಸ್ಪತ್ರೆಗೆ ದಾಖಲಾದರೆ, ಡಿಪ್ರೆಷನ್​ಗೆ ಒಳಗಾದರೆ, ಅಥವಾ ಆತ್ಮೀಯರನ್ನು ಕಳೆದುಕೊಂಡರೆ ಅವರಿಗೆ ಸಾಂತ್ವನ ಹೇಳುವ ಕೆಲವನ್ನು "ಸಾಂತ್ವನ" ಹೆಸರಿನಲ್ಲಿ ಸೇವೆಯನ್ನು ಪ್ರಾರಂಭಿಸಿದ್ದೇವೆ ಎಂದು ಟೆಲಿ ಕೇರ್ ಬಗ್ಗೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಈಟಿವಿ ಭಾರತಕ್ಕೆ ತಿಳಿಸಿದರು.

ABOUT THE AUTHOR

...view details