ಮೈಸೂರು :ಕಪಿಲೆ ಹಾಗೂ ಕಾವೇರಿ ಅಬ್ಬರಕ್ಕೆ ಮೈಸೂರು ಜಿಲ್ಲೆಯಾದ್ಯಂತ 65 ಮನೆಗಳಿಗೆ ಹಾನಿಯಾದ್ರೆ, 26 ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ನಂಜನಗೂಡಿನಲ್ಲಿ 2 ಮನೆ, ಹೆಚ್‌ಡಿಕೋಟೆಯಲ್ಲಿ 15 ಎಕರೆ ಬೆಳೆ, 17 ಮನೆಗಳು ಹಾನಿ, ಹುಣಸೂರಿನಲ್ಲಿ 13 ಮನೆ, ಪಿರಿಯಾಪಟ್ಟಣದಲ್ಲಿ 6 ಮನೆ, ಸರಗೂರಿನಲ್ಲಿ 20 ಎಕರೆ ಪ್ರದೇಶ, 27 ಮನೆಗಳು ಹಾನಿಯಾಗಿವೆ.
ಕಪಿಲೆ, ಕಾವೇರಿ ಅಬ್ಬರ ; 65 ಮನೆಗಳಿಗೆ ಹಾನಿ
ನಂಜನಗೂಡಿನ ಸೀತಾರಾಮ ಕಲ್ಯಾಣ ಭವನದಲ್ಲಿ 120 ಮಂದಿ ಸಂತ್ರಸ್ತರು, ಅಂಗನವಾಡಿ ಕೇಂದ್ರ ಸರಸ್ವತಿ ಕಾಲೋನಿಯಲ್ಲಿ 10 ಮಂದಿ ಸಂತ್ರಸ್ತರು, ಕೆಆರ್‌ನಗರ ತಾಲೂಕಿನ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ 4 ಸಂತ್ರಸ್ತರು ಒಟ್ಟು 133 ಮಂದಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ..
ಕಪಿಲೆ ಕಾವೇರಿ ನದಿ ಪ್ರವಾಹ
ನಂಜನಗೂಡಿನ ಸೀತಾರಾಮ ಕಲ್ಯಾಣ ಭವನದಲ್ಲಿ 120 ಮಂದಿ ಸಂತ್ರಸ್ತರು, ಅಂಗನವಾಡಿ ಕೇಂದ್ರ ಸರಸ್ವತಿ ಕಾಲೋನಿಯಲ್ಲಿ 10 ಮಂದಿ ಸಂತ್ರಸ್ತರು, ಕೆಆರ್‌ನಗರ ತಾಲೂಕಿನ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ 4 ಸಂತ್ರಸ್ತರು ಒಟ್ಟು 133 ಮಂದಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಪ್ರವಾಹದ ಸ್ಥಳಗಳಲ್ಲಿ ಬದಲಿ ಸಂಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.