ಮೈಸೂರು :ವರುಣಾ ಕ್ಷೇತ್ರದ ಮೇಲೆ ಅಪಾರ ಪ್ರೀತಿ ತೋರಲು ಮುಂದಾಗಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರರಿಗೆ ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ಶಾಸಕ ಡಾ.ಯತೀಂದ್ರ ಟಕ್ಕರ್ ಕೊಟ್ಟಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಯಾರೇ ಬರಲಿ ನನಗೆ ಸೋಲಿನ ಆತಂಕ ಇಲ್ಲ. ವರುಣಾ ಕ್ಷೇತ್ರದ ಜನ ಹೇಗೆ ಅಂತಾ ನಮಗೆ ಚೆನ್ನಾಗಿ ಗೊತ್ತು. ನಮ್ಮ ತಂದೆ ಕಾಲದಿಂದಲೂ ಈ ಕ್ಷೇತ್ರ ನಮ್ಮನ್ನ ಕೈ ಹಿಡಿದಿದೆ. ಅಪ್ಪ ಮತ್ತು ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದಿದ್ದಾರೆ.
ವರುಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ.. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಬೇಕು: ಶಾಸಕ ಯತೀಂದ್ರ
ಕಳೆದ ಬಾರಿಯೂ ವಿಜಯೇಂದ್ರ ಬರ್ತಾರೆ ಅಂತಿದ್ರು. ಈ ಬಾರಿಯೂ ಬರ್ತಾರೆ ಅನ್ನುತ್ತಿದ್ದಾರೆ. ಯಾರೇ ಬಂದರೂ ನಾನು ಎದುರಿಸಲು ಸಿದ್ಧ. ಅಪ್ಪ ಬಯಸಿದ್ರೆ ವರುಣಾ ಕ್ಷೇತ್ರದ ತ್ಯಾಗಕ್ಕೂ ಸಿದ್ಧ ಎಂದರು.
ಮೈಸೂರು ಟ್ರಾಫಿಕ್ ಪೊಲೀಸರ ವಿರುದ್ಧ ಜನಾಕ್ರೋಶ ವಿಚಾರವಾಗಿ ಮಾತನಾಡಿದ ಅವರು, ಮೈಸೂರಿನಲ್ಲಷ್ಟೇ ಅಲ್ಲ, ಬೇರೆ ಕಡೆಯೂ ಟ್ರಾಫಿಕ್ ಪೊಲೀಸರ ಬಗ್ಗೆ ಆರೋಪವಿದೆ. ತಂತ್ರಜ್ಞಾನ ಬೆಳೆದಿದೆ, ಆಧುನಿಕ ಕ್ಯಾಮೆರಾ ವಾಹನಗಳನ್ನ ನೀಡಲಾಗಿದೆ.
ಮೊಬೈಲ್‌ಗೆ ಸಂದೇಶ ಕಳುಹಿಸುವ ವ್ಯವಸ್ಥೆ ಇದೆ. ಹೀಗಿರುವಾಗ, ಚೇಸ್ ಮಾಡಿ ವಾಹನ ಅಡ್ಡಗಟ್ಟೋದು ಎಷ್ಟು ಸರಿ?. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಆಗಬೇಕು ಎಂದರು.