ಕರ್ನಾಟಕ

karnataka

ETV Bharat / city

ಪ್ರತಾಪ್​ ಸಿಂಹ ಸಹ ಮತಾಂತರವಾಗಲಿ : ಶಾಸಕ ತನ್ವೀರ್ ಸೇಠ್ ತಿರುಗೇಟು - ಶಾಸಕ ತನ್ವೀರ್ ಸೇಠ್ ತಿರುಗೇಟು

ಶಾಹಿದ್‌ ಅವರನ್ನ ಯಾವ ಕಾರಣಕ್ಕೆ ಉಚ್ಛಾಟನೆ ಮಾಡಿದ್ದಾರೆ ಅಂತಾ ನನಗೆ ನಿಖರ ಮಾಹಿತಿ ಇಲ್ಲ. ಆದರೆ, ಪಕ್ಷದಲ್ಲಿ ದುಡಿದ ನಿಷ್ಠಾವಂತರನ್ನ ಈ ರೀತಿ ಉಚ್ಛಾಟನೆ ಮಾಡಿದ್ರೆ ಪಕ್ಷ ಸಂಘಟನೆಗೆ ಕಷ್ಟವಾಗುತ್ತದೆ. ಇಬ್ರಾಹಿಂ ಸ್ವಾಗತಿಸಿದ್ದಕ್ಕೆ ಉಚ್ಛಾಟನೆ ಮಾಡಿದ್ರಾ?, ಬೇರೆ ಕಾರಣಕ್ಕೆ ಉಚ್ಛಾಟಿಸಿದ್ರಾ?. ಈ ಕುರಿತು ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ..

ಪ್ರತಾಪ್​ ಸಿಂಹಗೆ  ಶಾಸಕ ತನ್ವೀರ್ ಸೇಠ್ ತಿರುಗೇಟು
ಪ್ರತಾಪ್​ ಸಿಂಹಗೆ ಶಾಸಕ ತನ್ವೀರ್ ಸೇಠ್ ತಿರುಗೇಟು

By

Published : Feb 7, 2022, 6:35 PM IST

ಮೈಸೂರು: ತನ್ವೀರ್ ಸೇಠ್‌ ಪೂರ್ವಜರು ಮತಾಂತರವಾಗಿದ್ದರು ಎಂಬ ಸಂಸದ ಪ್ರತಾಪ್​ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ತನ್ವೀರ್ ಸೇಠ್ ಅವರು, ‘ಪ್ರತಾಪ್​ ಸಿಂಹ ಕೂಡ ಮತಾಂತರವಾಗಲಿ’ ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರತಾಪ್​ ಸಿಂಹ ಅವರು ಯಾವ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ ಎಂಬುವುದು ಅವರಿಗೆ ಗೊತ್ತಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡಿರಬಹುದು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬೇಕಾದರೆ ಅವರೇ ಮತಾಂತರ ಆಗಲಿ ಎಂದು ಗರಂ ಆದರು.

ಸಂಸದ ಪ್ರತಾಪ್​ ಸಿಂಹಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿರುವುದು..

ಆಪ್ತ ಶಾಹಿದ್ ಖಾದರ್ ಅವರನ್ನ ಪಕ್ಷ ಉಚ್ಛಾಟನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಯಾವ ಶಕ್ತಿಯೂ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಫಲ ಕೊಡುವ ಮರಕ್ಕೆ ಜಾಸ್ತಿ ಕಲ್ಲೇಟು. ನನ್ನನ್ನು ಹಾಗೂ ನನ್ನ ಬೆಂಬಲಿಗರನ್ನ ಟಾರ್ಗೆಟ್ ಮಾಡ್ತಿರೋದು ನಿಜ. ಮೇಯರ್ ಚುನಾವಣೆ ಬಳಿಕ ಇದು ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಹಿದ್‌ ಅವರನ್ನ ಯಾವ ಕಾರಣಕ್ಕೆ ಉಚ್ಛಾಟನೆ ಮಾಡಿದ್ದಾರೆ ಅಂತಾ ನನಗೆ ನಿಖರ ಮಾಹಿತಿ ಇಲ್ಲ. ಆದರೆ, ಪಕ್ಷದಲ್ಲಿ ದುಡಿದ ನಿಷ್ಠಾವಂತರನ್ನ ಈ ರೀತಿ ಉಚ್ಛಾಟನೆ ಮಾಡಿದ್ರೆ ಪಕ್ಷ ಸಂಘಟನೆಗೆ ಕಷ್ಟವಾಗುತ್ತದೆ. ಇಬ್ರಾಹಿಂ ಸ್ವಾಗತಿಸಿದ್ದಕ್ಕೆ ಉಚ್ಛಾಟನೆ ಮಾಡಿದ್ರಾ?, ಬೇರೆ ಕಾರಣಕ್ಕೆ ಉಚ್ಛಾಟಿಸಿದ್ರಾ?. ಈ ಕುರಿತು ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಹಿಜಾಬ್ ವಿವಾದ ಜಾಸ್ತಿಯಾಗುತ್ತಿರುವುದರಿಂದ ಸಮವಸ್ತ್ರ ಜಾರಿ ಮಾಡಿ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಮವಸ್ತ್ರ ವಿಚಾರವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ, ಕಾನೂನು ಬಾಹಿರವಾಗಿದೆ. ಏಕಾಏಕಿಯಾಗಿ ಆದೇಶ ಹೊರಡಿಸಿದ್ದಾರೆ. ಇದು ಏಕಪಕ್ಷಿಯವಾದ ನಿರ್ಧಾರ, ಈ ನಿರ್ಧಾರ ಸರಿಯಲ್ಲ. ಈ ಸಂಬಂಧ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಓದಿ:ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಟ್ವಿಟರ್​ನಲ್ಲಿ ಕೊಲೆ ಬೆದರಿಕೆ.. ಎಫ್​ಐಆರ್​ ದಾಖಲು

ಹಿಜಾಬ್ ವಿಚಾರ ನ್ಯಾಯಾಲಯದ ಮುಂದೆ ಇದೆ. ನ್ಯಾಯಾಲಯದ ಬೆಳವಣಿಗೆ ಕಾದು ನೋಡಬೇಕಿದೆ. ಮದ್ರಾಸ್ ಹೈಕೋರ್ಟ್ ಮಹಾರಾಷ್ಟ್ರದಲ್ಲಿ ಅವಕಾಶ ನೀಡಿದೆ. ಅದರ ಆದೇಶದ ಪ್ರತಿ ನಮ್ಮ ಬಳಿ ಇದೆ. ನಮ್ಮಲ್ಲಿ ರಾಜಕೀಯ ದುರುದ್ದೇಶ ಹಾಗೂ ವೋಟ್ ಬ್ಯಾಂಕ್‌ಗಾಗಿ ಹೀಗೆ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details