ಬೆಳಗಾವಿ:ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆ ಕುಂದಾನಗರಿಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಸ್ವಾಗತಿಸಿದರು.
ಸಿಎಂ ಬಿಎಸ್‍ವೈ ಜೊತೆ ಚರ್ಚೆ ಬಳಿಕ ಸಂಪುಟ ವಿಸ್ತರಣೆ ಕುರಿತು ನಿರ್ಧಾರ: ಅರುಣ್ ಸಿಂಗ್ - ಶಾಸಕ ಅಭಯ್ ಪಾಟೀಲ
ರಾಜ್ಯದಲ್ಲಿ ಸಂಪುಟ ವಿಸ್ತರಣೆ ವಿಚಾರ ಕುರಿತಂತೆ ಸಿಎಂ ಯಡಿಯೂರಪ್ಪನವರ ಜತೆಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಮಾಡಲಿದ್ದೇವೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ಅರುಣ್ ಸಿಂಗ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯದಲ್ಲಿ ಸಂಪುಟ ವಿಸ್ತರಣೆ ವಿಚಾರ ಕುರಿತಂತೆ ಸಿಎಂ ಯಡಿಯೂರಪ್ಪನವರ ಜೊತೆಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ ..ಇಂದು ಬೆಳಗಾವಿಗೆ ಬಿಎಸ್‍ವೈ - ಅರುಣ್ ಸಿಂಗ್ ಆಗಮನ: ಸಂಪುಟ ಸರ್ಕಸ್ಗೆ ಸಿಗುತ್ತಾ ತಾರ್ಕಿಕ ಅಂತ್ಯ?
ಸರ್ಕಾರದ ಸಾಧನೆಯನ್ನು ಪಕ್ಷದ ಕಾರ್ಯಕರ್ತರಿಗೆ ತಲುಪಿಸಲು ಸಭೆ ಮಾಡುತ್ತಿದ್ದೇವೆ. ಪಕ್ಷದ ದೃಷ್ಟಿಯಲ್ಲಿ ಕರ್ನಾಟಕ ಮಹತ್ವದ ರಾಜ್ಯವಾಗಿದೆ. ವರಿಷ್ಠರಿಂದ ತಂದಿರುವ ಸಂದೇಶದ ಬಗ್ಗೆ ಕೋರ್ ಕಮಿಟಿಯಲ್ಲಿಯೇ ಚರ್ಚೆ ಮಾಡುತ್ತೇನೆ. ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಇದು ನಮ್ಮ ಆಂತರಿಕ ವಿಚಾರ. ಈ ಬಗ್ಗೆ ಬಹಿರಂಗ ಚರ್ಚೆ ಮಾಡುವುದಿಲ್ಲ ಎಂದರು.
Last Updated : Dec 4, 2020, 8:48 PM IST