ಮೈಸೂರು :ಆರ್ಎಸ್ಎಸ್ ಅನ್ನು ಅಲ್ ಖೈದಾಗೆ ಕಾಂಗ್ರೆಸ್ ಹೋಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಾರಿಗೂ ಆತಂಕ ಬೇಡ. ಎಲ್ಲಾ ಆರೋಪಗಳಿಗೂ ಉತ್ತರ ಕೊಡಲು ಬಿಜೆಪಿ ಸರ್ಕಾರ ಸಿದ್ದವಿದೆ ಎಂದು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಯಾವಾಗ ಬಿಜೆಪಿಯನ್ನ ಹೊಗಳಿದ್ದಾರೆ?. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಯಾವಾಗಲೂ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ಹೇಳಿಲ್ಲ. ಬೊಮ್ಮಾಯಿಯವರ ಸರ್ಕಾರ ಸರ್ವರಿಗೂ ನ್ಯಾಯ ಕೊಡುವ ದಿಕ್ಕಿನಲ್ಲಿ ಕಠಿಣ ಕಾನೂನು ಸುವ್ಯವಸ್ಥೆಯನ್ನ ಕಾಪಾಡಿಕೊಂಡು ಬಂದಿದೆ ಎಂದರು.