ಕರ್ನಾಟಕ

karnataka

ETV Bharat / city

ಹೆಚ್ ಡಿ ಕೋಟೆಯ ಚಿಕ್ಕದೇವಮ್ಮನ ಬೆಟ್ಟದಲ್ಲಿ ಸಮಸ್ಯೆಗಳ ಸರಮಾಲೆ - ಚಿಕ್ಕದೇವಮ್ಮನ ಬೆಟ್ಟ

ಮುಜರಾಯಿ ಇಲಾಖೆ ಇದನ್ನು ತನ್ನ ಸುಪರ್ದಿಗೆ ಪಡೆದಿರುವ ಹೆಚ್ ಡಿ ಕೋಟೆಯ ಸರಗೂರು ಸಮೀಪವಿರುವ ಚಿಕ್ಕದೇವಮ್ಮನ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಕಾರಣ ಈ ದೇವಸ್ಥಾನಕ್ಕೆ ಬಂದವರು, ಇಲ್ಲಿನ ನೆಲಕ್ಕೆ ಹಾಕಲಾಗಿರುವ ಟೈಲ್ಸ್​ನಿಂದಾಗಿ ಕಾಲು ಸುಟ್ಟುಕೊಳ್ಳುತ್ತಾರೆ, ಅಥವಾ ಜಾರಿ ಬೀಳುತ್ತಾರೆ. ಮುಜರಾಯಿ ಇಲಾಖೆ ಹುಂಡಿ ತುಂಬಿದ ತಕ್ಷಣ ಬಂದು ಹಣ ತೆಗೆದುಕೊಂಡು ಹೋಗುವುದಕ್ಕಷ್ಟೇ ಸೀಮಿತವಾಗಿದೆ ಎಂದು ದೇವಸ್ಥಾನದ ಪೂಜಾರಿಗಳು ಆರೋಪಿಸಿದ್ದಾರೆ.

ಚಿಕ್ಕದೇವಮ್ಮನ ಬೆಟ್ಟದಲ್ಲಿ ಸಮಸ್ಯೆಗಳ ಸರಮಾಲೆ

By

Published : Oct 5, 2019, 11:16 PM IST

ಮೈಸೂರು:ನಗರದಲ್ಲಿರುವ ಚಾಮುಂಡಿಬೆಟ್ಟ ಎಷ್ಟು ಪ್ರಸಿದ್ಧವೋ, ಹೆಚ್ ಡಿ ಕೋಟೆಯ ಸರಗೂರು ಸಮೀಪ ಇರುವ ಚಿಕ್ಕದೇವಮ್ಮನ ಬೆಟ್ಟವೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಆದರೆ ಈ ಬೆಟ್ಟಕ್ಕೆ ಹೋಗಿ ಬರುವಷ್ಟರಲ್ಲಿ ಭಕ್ತರೆಲ್ಲಾ ಹೈರಾಣಾಗಿ, ಇನ್ಯಾವತ್ತೂ ಇಲ್ಲಿಗೆ ಬರಬಾರದಪ್ಪಾ ಅಂದುಕೊಂಡು ಹೋಗುವಂತಾಗಿದೆ.

ಚಿಕ್ಕದೇವಮ್ಮನ ಬೆಟ್ಟ ಇತ್ತೀಚಿಗೆ ಬಹಳ ಪ್ರಸಿದ್ಧಿ ಪಡೆದಿದ್ದು, ಮುಜರಾಯಿ ಇಲಾಖೆ ಇದನ್ನು ತನ್ನ ಸುಪರ್ದಿಗೆ ಪಡೆದಿದೆ. ಆದರೆ ದೇವಾಲಯದ ಅಭಿವೃದ್ಧಿ ಮಾತ್ರ ಶೂನ್ಯ.

ಚಿಕ್ಕದೇವಮ್ಮನ ಬೆಟ್ಟ ದೇಗುಲ

ಮಳೆ ಬಂದರೆ ಜಾರುವ, ಬಿಸಿಲು ಬಂದರೆ ಬೆಂಕಿಯ ಹಾಗೆ ಸುಡುವ ಟೈಲ್ಸ್​ಗಳನ್ನು ದೇವಾಲಯದ ಸುತ್ತಲೂ ಹಾಕಲಾಗಿದ್ದು, ಭಕ್ತರು ಒಂದು ಹೆಜ್ಜೆ ಕೂಡ ಇಡಲಾಗದ ಪರಿಸ್ಥಿತಿ ಇದೆ. ಸಂಪ್ರದಾಯದಂತೆ ದೇವಾಲಯದ ಅವರಣಕ್ಕೆ ಪಾದರಕ್ಷೆಹಾಕಿಕೊಂಡು ಯಾರೂ ಹೋಗುವುದಿಲ್ಲ. ಇದನ್ನ ಅರ್ಥ ಮಾಡಿಕೊಳ್ಳದ ದೇವಾಲಯ ಸಮಿತಿ ನೋಡಲು ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ಈ ರೀತಿಯ ಟೈಲ್ಸ್ ಹಾಕಿದೆ. ದೇವರ ದರ್ಶನಕ್ಕೆ ಬರುವ ಜನ ಕಾಲು ಸುಟ್ಟುಕೊಂಡು ಹೋಗುತ್ತಿದ್ದಾರೆ.

ಚಿಕ್ಕದೇವಮ್ಮನ ಬೆಟ್ಟದಲ್ಲಿ ಸಮಸ್ಯೆಗಳ ಸರಮಾಲೆ

ಈ ಬಗ್ಗೆ ಇಲ್ಲಿನ ಪೂಜಾರಿಯನ್ನು ಕೇಳಿದರೆ, ಮುಜರಾಯಿ ಇಲಾಖೆಯವರು ಕೇವಲ ಹಣದ ಹುಂಡಿ ತುಂಬಿದ ತಕ್ಷಣ ಬಂದು ಹಣ ತೆಗೆದುಕೊಂಡು ಹೋಗುತ್ತಾರೆ. ಯಾವುದೇ ಮೂಲಭೂತ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗುತ್ತಿಲ್ಲ ಎನ್ನುತ್ತಿದ್ದಾರೆ.

ಇನ್ನು ದೇವಾಲಯದ ಸುತ್ತಲೂ ಎರಡು ಅಡಿ ಅಗಲದ ಕಾರ್ಪೆಟ್ ಇದ್ದು ಅದನ್ನು ಮೂಲೆಗೆ ಎಸೆಯಲಾಗಿದೆ. ದೇವರನ್ನು ನೋಡಿ ತಮ್ಮ ಕಷ್ಟ ಪರಿಹಾರ ಮಾಡಿಕೊಳ್ಳೋಣ ಅಂತಾ ಭಕ್ತರು ಇಲ್ಲಿಗೆ ಬಂದರೆ, ಮತ್ತಷ್ಟು ನೋವು ಪಡೆದುಕೊಂಡು ಹೋಗುತ್ತಿರುವುದರಲ್ಲಿ ಎರಡು ಮಾತಿಲ್ಲ.

ABOUT THE AUTHOR

...view details