ಮೈಸೂರು:ಮಾಂಗಲ್ಯಂ ತಂತು ನಾನೇನಾ ಸಿನೆಮಾದಲ್ಲಿ ಕಾರು ಚಾಲಕನಾಗಿ ಅಭಿನಯಿಸಲು ಹೋದಾಗ ಎಸ್ಪಿಬಿ ಪ್ರೀತಿಯಿಂದ ಮೈದಡವಿದರು ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗಿನ ತಮ್ಮ ಒಡನಾಟದ ಅನುಭವವನ್ನು ನಟ ಮಂಡ್ಯ ರಮೇಶ್ ಹಂಚಿಕೊಂಡಿದ್ದಾರೆ.
ಎಸ್ಪಿಬಿ ಜೊತೆಗಿನ ಒಡನಾಟದ ಅನುಭವ ಹಂಚಿಕೊಂಡ ಮಂಡ್ಯ ರಮೇಶ್ - Actor Mandya Rame
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಮಾತನಾಡುವುದೊ೦ದು ಅನುಭಾವದ ಲೋಕ ಎಂದು ಎಸ್ಪಿಬಿ ಅವರೊಂದಿಗಿನ ಒಡನಾಟದ ಬಗ್ಗೆ ನಟ ಮಂಡ್ಯ ರಮೇಶ್ ಹಂಚಿಕೊಂಡಿದ್ದಾರೆ.
ಕುವೆಂಪು ಹಾಗೂ ಡಾ.ರಾಜ್ಕುಮಾರ್ ನಂತರ ಅತಿ ಹೆಚ್ಚು ಹತ್ತಿರವಾದ ಕನ್ನಡಾಪ್ತ ವ್ಯಕ್ತಿತ್ವಗಳಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಕೂಡ ಒಬ್ಬರು. ಅವರ ಹೆಸರಿಗೆ ಒಂದು ಶಕ್ತಿಯಿದೆ. ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಮಹಾ ಎಡಬಿಡಂಗಿ ಎಂಬ ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿ ಪುಟ್ಟ ಪಾತ್ರವಿದೆ ಮಾಡುತ್ತೀರಾ ಎಂದು ಕೇಳಿದ್ದರು. ನಾನು ತಪ್ಪಿಸಿಕೊಳ್ಳಲು ಯತ್ನಿಸಿದ್ದೆ. ಚಿತ್ರದಲ್ಲಿ 'ಪಿಬರೇ ರಾಮರಸಂ' ಎಂಬ ಹಾಡಿದ್ದು, ಅದನ್ನು ಎಸ್ಪಿಬಿಯವರೇ ಹಾಡುತ್ತಾರೆ. ನೀವು ಅವರ ಜೊತೆ ಕುಡಿಯುವ ಗೆಳೆಯನಾಗಿ ಇರಬೇಕು ಎಂದಿದ್ದರು. ಆಮೇಲೆ ನಾನು ನಟಿಸಲು ಒಪ್ಪಿಕೊಂಡೆ.
ಅವರೊಂದಿಗೆ ಮಾತನಾಡುವುದೊ೦ದು ಅನುಭಾವದ ಲೋಕ. ರಾಗ, ಸಂದರ್ಭ, ತಮಾಷೆ, ಆತ್ಮವಿಮರ್ಶೆ ಮಾಡಿದಂತೆ. ಅವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದರು. ಅವರ ಪ್ರತಿ ಹಾಡು ಕೇಳುಗರ ಮೈ ರೋಮಾಂಚನಗೊಳಿಸುತ್ತದೆ ಎಂದರು.