ಕರ್ನಾಟಕ

karnataka

ETV Bharat / city

ಮೈಸೂರು : ಕೊಂಡ ಹಾಯುವಾಗ ಬೆಂಕಿಗೆ ಬಿದ್ದ ಭಕ್ತ

ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಹುಚ್ಚುಗಮ್ಮ ದೇವಿ ಮತ್ತು ಲಕ್ಷ್ಮಿದೇವಿ ಹಬ್ಬದ ಕೊಂಡೋತ್ಸವವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಭಕ್ತನೋರ್ವ ಆಯಾ ತಪ್ಪಿ ಬಿದ್ದಿದ್ದಾರೆ..

Kendotsava in Mysore
ಕೊಂಡ ಹಾಯುವಾಗ ಬೆಂಕಿಗೆ ಬಿದ್ದ ಭಕ್ತ

By

Published : Mar 29, 2022, 12:33 PM IST

ಮೈಸೂರು :ಕೊಂಡ ಹಾಯುವಾಗ ಆಯಾ ತಪ್ಪಿ ಭಕ್ತನೋರ್ವ ಬೆಂಕಿಗೆ ಬಿದ್ದಿರುವ ಘಟನೆ ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ರಂಗಸಮುದ್ರ ಗ್ರಾಮದಲ್ಲಿ ನಡೆಯುವ ಹುಚ್ಚುಗಮ್ಮ ದೇವಿ ಮತ್ತು ಲಕ್ಷ್ಮಿದೇವಿ ಹಬ್ಬದ ಕೊಂಡೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಭಕ್ತರು ಕೊಂಡ ಹಾಯ್ದರು.

ಕೊಂಡ ಹಾಯುವಾಗ ಬೆಂಕಿಗೆ ಬಿದ್ದ ಭಕ್ತ..

ಆದರೆ, ಕೊಂಡ ಹಾಯುವಾಗ ಭಕ್ತನೋರ್ವ ಆಕಸ್ಮಿಕವಾಗಿ ಆಯಾ ತಪ್ಪಿ ಬಿದ್ದಿದ್ದಾರೆ. ನಂತರ ಕೂಡಲೇ ನೆರೆದಿದ್ದ ಭಕ್ತರು, ಭಕ್ತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌. ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕೊಂಡೋತ್ಸವ ನಿಲ್ಲಿಸಲಾಗಿತ್ತು. ಆದರೆ, ಈ ವರ್ಷ ಅದ್ದೂರಿಯಾಗಿ ಕೊಂಡೋತ್ಸವ ಆಯೋಜನೆ ಮಾಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ತೆಳ್ಳನೂರ ಕೊಂಡೋತ್ಸವ: ಮೈಮೇಲೆ ಕೆಂಡ ಸುರಿದುಕೊಂಡು ಭಕ್ತಿಯ ಪರಾಕಾಷ್ಠೆ

ABOUT THE AUTHOR

...view details