ಕರ್ನಾಟಕ

karnataka

ETV Bharat / city

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ - ಗಾಂಧೀಜಿ ಕೊಂದವರು ಈ ಮಾತು ಹೇಳ್ತಾರೆ: ಎಂ.ಕೆ. ಸೋಮಶೇಖರ್ - ಇಂದಿರಾ ಕ್ಯಾಂಟೀನ್

ಮಹಾತ್ಮ ಗಾಂಧೀಜಿಯವರನ್ನು ಕೊಂದವರು, ಸ್ವಾತಂತ್ರ್ಯ ಬಂದ ದೇಶಕ್ಕೆ ಕೋಮುಗಲಭೆ ಹಂಚಿ ದೇಶ ವಿಭಜನೆ ಮಾಡಿದವರು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು ಎನ್ನುತ್ತಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದ್ದಾರೆ.

m k somashekar
ಮಾಜಿ ಶಾಸಕ ಎಂ.ಕೆ. ಸೋಮಶೇಖರ್

By

Published : Aug 18, 2021, 8:28 PM IST

ಮೈಸೂರು:ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು ಎನ್ನುವವರಿಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಮಹಾತ್ಮ ಗಾಂಧೀಜಿ ಕೊಂದವರು ಹಾಗೂ ದೇಶ ವಿಭಜನೆ ಮಾಡಿದವರು ಈ ಮಾತು ಹೇಳುತ್ತಾರೆ ಎಂದು ಎಂ.ಕೆ. ಸೋಮಶೇಖರ್ ಕಿಡಿಕಾರಿದ್ದಾರೆ.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್

ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಹೋರಾಟವನ್ನೇ ಮಾಡಿಲ್ಲದವರು ಹಾಗೂ ಸ್ವಾತಂತ್ರ್ಯಕ್ಕಾಗಿ ಭಾಗಿಯಾಗದೇ ಇದ್ದವರು ಇಂತಹ ಮಾತುಗಳನ್ನಾಡುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಅವರನ್ನು ಕೊಂದವರು, ಸ್ವಾತಂತ್ರ್ಯ ಬಂದ ದೇಶಕ್ಕೆ ಕೋಮುಗಲಭೆ ಹಂಚಿ ದೇಶ ವಿಭಜನೆ ಮಾಡಿದವರು ಇಂದಿರಾಗಾಂಧಿ ಬಗ್ಗೆ ಮಾತನಾಡುತ್ತಾರೆ. ದೇಶ ಅಭಿವೃದ್ಧಿಯಾಗಬೇಕು ಎನ್ನುವವರು ಹೀಗೆ ಮಾತನಾಡುವುದಿಲ್ಲ ಎಂದರು.

ಇದನ್ನೂ ಓದಿ:ಬಿಜೆಪಿಗೆ ಕ್ಯಾಂಟೀನ್ ಹೆಸರು ಬದಲಾವಣೆಯಲ್ಲಿರುವ ಆಸಕ್ತಿ ರಾಜ್ಯದ ಅಭಿವೃದ್ದಿ ಕಡೆಯಿಲ್ಲ: ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ

ಸ್ವಾತಂತ್ರ್ಯಕ್ಕಾಗಿ ನೆಹರು, ಅವರ ತಂದೆ ಮೋತಿಲಾಲ್ ನೆಹರು ಹೋರಾಟ ಮಾಡಿದ್ದಾರೆ. ಅಲ್ಲದೇ ನೆಹರು ಅವರು ಅಧಿಕಾರ ಅವಧಿಗಿಂತ ಹೆಚ್ಚಿನ ದಿನ ಜೈಲಿನಲ್ಲಿ ಕಳೆದಿದ್ದಾರೆ. ಇಂದಿರಾಗಾಂಧಿ ಅನೇಕ ಜನಪ್ರಿಯ ಯೋಜನೆಗಳನ್ನು ದೇಶಕ್ಕೆ ನೀಡಿದ್ದಾರೆ. ಇದನ್ನು ತಿಳಿಯದವರು ಅವರ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details