ಕರ್ನಾಟಕ

karnataka

ETV Bharat / city

ಉಕ್ರೇನ್​​ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ನೆರವಿಗೆ ಬಂದ ಜೆಎಸ್​​ಎಸ್

ಮೈಸೂರಿನ ಜೆಎಸ್​​ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉಕ್ರೇನ್, ರಷ್ಯಾ, ಚೀನಾ ಮುಂತಾದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು ತೊಂದರೆಗೊಳಗಾಗಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವಕಾಶ ಕಲ್ಪಿಸಲಾಗಿದೆ.

JSS College
ಮೈಸೂರಿನ ಜೆಎಸ್​​ಎಸ್ ಕಾಲೇಜು

By

Published : May 1, 2022, 12:39 PM IST

ಮೈಸೂರು:ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಅಂತಾರಾಷ್ಟ್ರೀಕರಣ ಮತ್ತು ಶೈಕ್ಷಣಿಕ ಸಹಾಯ ನೀಡುವ ಯೋಜನೆಯ ಭಾಗವಾಗಿ, ಉಕ್ರೇನ್, ರಷ್ಯಾ, ಚೀನಾ ಮುಂತಾದ ದೇಶಗಳಲ್ಲಿ ತೊಂದರೆಗೀಡಾಗಿ ವಿದ್ಯಾಭ್ಯಾಸ ಅಪೂರ್ಣಗೊಳಿಸಿರುವ ಭಾರತೀಯ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಅವಕಾಶ ಒದಗಿಸುತ್ತಿದೆ.

ಸುತ್ತೂರು ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿಯವರ ಸೂಚನೆಯಂತೆ ಸಂಸ್ಥೆ ವ್ಯಾಸಂಗಕ್ಕೆ ಅವಕಾಶ ನೀಡಲು ಮುಂದಾಗಿದ್ದು, ಈ ಸಹಾಯ ಕಾನೂನುರೀತ್ಯಾ ಅನುಮತಿಸಲಾದ ಸೇತುಬಂಧ (ಬ್ರಿಡ್ಜಿಂಗ್) ಶಿಕ್ಷಣದ ಸ್ವರೂಪದಲ್ಲಿರುತ್ತದೆ. ವಿದ್ಯಾರ್ಥಿಗಳು ವಿದೇಶದಲ್ಲಿ ಯಾವ ಸೆಮಿಸ್ಟರ್, ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದರು ಎಂಬ ಅಂಶದ ಮೇಲೆ ತರಬೇತಿ ನೀಡಲಾಗುವುದು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಇದಕ್ಕಾಗಿ ಸಿಲ್ಕ್ ಲ್ಯಾಬ್ ಮತ್ತು ವರ್ಚುವಲ್ ಕೇಸ್ ಸನ್ನಿವೇಶಗಳನ್ನು ಬಳಸಿಕೊಂಡು ತರಗತಿ ನಡೆಸಿ, ಕ್ಲಿನಿಕಲ್ ಅಧ್ಯಯನಕ್ಕಾಗಿ ಸೂಕ್ತ ಕೌಶಲ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಊಟ, ವಸತಿಯ ವ್ಯವಸ್ಥೆ ವಿದ್ಯಾರ್ಥಿಗಳದ್ದೇ ಆಗಿರುತ್ತದೆ.

ಇದು ಕೇವಲ ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳಿಗಾಗಿ ನೀಡಿರುವ ತಾತ್ಕಾಲಿಕ ಬೆಂಬಲವಾಗಿದೆ. ಬ್ರಿಡ್ಜ್ ಕೋರ್ಸ್ ಸೌಲಭ್ಯವನ್ನು ಬಳಸಿಕೊಳ್ಳಲು ಆಸಕ್ತಿಯಿರುವ ವಿದ್ಯಾರ್ಥಿಗಳು ಮೈಸೂರು ಜೆಎಸ್​​ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಔಷಧಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಡಿ ಸುನೀಲ್ ಕುಮಾರ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್‌ ಸಂಖ್ಯೆ- 6366366663 ಇ-ಮೇಲ್- jiii@jssuni.edu.in

ಇದನ್ನೂ ಓದಿ:ಉಕ್ರೇನ್, ಚೀನಾದಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ‌ ನೆರವಾದ ಎಂ.ಬಿ ಪಾಟೀಲ

ABOUT THE AUTHOR

...view details