ಮೈಸೂರು:ಅಂತಾರಾಜ್ಯ ಸರಗಳ್ಳಿಯನ್ನು ಬಂಧಿಸಿ, ಆಕೆಯಿಂದ ಸುಮಾರು 2.37 ಲಕ್ಷ ರೂ. ಮೌಲ್ಯದ 79 ಗ್ರಾಂ ತೂಕದ 4 ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂತಾರಾಜ್ಯ ಸರಗಳ್ಳಿ ಅಂದರ್: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ
ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಂತಾರಾಜ್ಯ ಸರಗಳ್ಳಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಈಕೆ ವಿರುದ್ಧ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಕಲಬುರಗಿ ಪಟ್ಟಣದ ಬಾಪೂನಗರ್ ಮಂಗರವಾಡಿ ನಿವಾಸಿ ಸರಸಮ್ಮ(35) ಬಂಧಿತ ಆರೋಪಿ. ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಜು. 24ರಂದು ಈಕೆ ಕೆಂಡಗಣ್ಣಮ್ಮ ಎಂಬುವರಿಂದ ಚಿನ್ನದ ಸರ ಕಸಿದು ಓಡುತ್ತಿದ್ದ ವೇಳೆ ಸಾರ್ವಜನಿಕರ ಸಹಾಯದಿಂದ ಹಿಡಿಯಲಾಗಿತ್ತು. ಆಕೆಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ, ಈಕೆ ಇದೇ ರೀತಿ 3 ಪ್ರಕರಣಗಳಲ್ಲಿ ಸರಗಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗ್ತಿದೆ.
ಬಂಧಿತ ಸರಗಳ್ಳಿಯಿಂದ ದೇವರಾಜ ಪೊಲೀಸ್ ಠಾಣೆಯ ಒಟ್ಟು 4 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸರಸಮ್ಮ ಇತರರೊಂದಿಗೆ ಸೇರಿ ಬೇರೆ ರಾಜ್ಯಗಳಲ್ಲಿಯೂ ಸಹ ಕೈಚಳಕ ತೋರಿಸಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.