ಕರ್ನಾಟಕ

karnataka

ETV Bharat / city

ಸಾಂಸ್ಕೃತಿಕ ನಗರಿಯಲ್ಲಿ 'ಸೆಲ್ಫಿ' ತಾಣವಾಯ್ತು 'I❤MYS' ಚಿಹ್ನೆ

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಿರುವ 'I❤MYS' ಚಿಹ್ನೆಗೆ ಪ್ರವಾಸಿಗರು ಮಾರುಹೋಗಿದ್ದು, ಸೆಲ್ಫಿ, ಫೊಟೋ ತಾಣವಾಗಿ ಪರಿವರ್ತಿಸಿದ್ದಾರೆ.

'IloveMYS' symbol for photo shoot spot

By

Published : Aug 26, 2019, 5:10 PM IST

ಮೈಸೂರು: ದಿನಾಲೂ ಜನಜಂಗುಳಿಯಿಂದ ಕಳೆಗಟ್ಟುತ್ತಿರುವ ಮೈಸೂರು ರೈಲ್ವೆ ನಿಲ್ದಾಣ, ಇದೀಗ ಪ್ರವಾಸಿಗರ ಹಾಗೂ ಸ್ಥಳೀಯರ 'ಸೆಲ್ಫಿ'ಯ ತಾಣವಾಗಿ ಮಾರ್ಪಟ್ಟಿದೆ.

ಹೌದು, ರೈಲ್ವೆ ನಿಲ್ದಾಣದ ಮುಂಭಾಗ ಇಂಗ್ಲಿಷ್ ಅಕ್ಷರಗಳಲ್ಲಿ ನಿರ್ಮಿಸಿರುವ 'I❤MYS' ಚಿಹ್ನೆಗೆ ಪ್ರವಾಸಿಗರು ಮಾರುಹೋಗಿದ್ದಾರೆ. 'I❤MYS' ಎಂದರೆ 'ಐ ಲವ್ ಮೈಸೂರು' ಎಂದರ್ಥ. ನಿಲ್ದಾಣದ ಮುಂಭಾಗ ಆಕರ್ಷಣೀಯವಾಗಿ ಕಾಣುವುದರಿಂದ ಮೈಸೂರಿಗೆ ಆಗಮಿಸುವ ಪ್ರಯಾಣಿಕರು, ಈ ಚಿಹ್ನೆ ನೋಡುತ್ತಿದ್ದಂತೆ ವಾವ್​​ ಎನ್ನುತ್ತಿದ್ದಾರೆ. ಅದರ ಮುಂದೆ ಸೆಲ್ಫಿ, ಫೊಟೋ ತೆಗೆದುಕೊಂಡು ಖುಷಿಪಡುತ್ತಿದ್ದಾರೆ.

'I❤MYS' ಚಿಹ್ನೆ

ಪ್ರವಾಸೋದ್ಯಮ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಎಂದೂ ಪ್ರವಾಸಿಗರು ತಿಳಿಸುತ್ತಾರೆ. ಮೈಸೂರು ರೈಲ್ವೆ ನಿಲ್ದಾಣದಲ್ಲಿ ₹ 15 ಕೋಟಿ ವೆಚ್ಚದಲ್ಲಿ ಹಲವು ಕಾಮಗಾರಿಗಳ ಅಭಿವೃದ್ಧಿ ಭರದಿಂದ ಸಾಗಿದೆ. ಈ ಚಿಹ್ನೆಯನ್ನು ₹ 3 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಇದೇ ರೀತಿ ಬೆಂಗಳೂರಿನ ಎರಡು ಕಡೆ ಮಾತ್ರ ಇದೆ. ಒಟ್ಟಿನಲ್ಲಿ ಪ್ರವಾಸಿಗರ ಕೇಂದ್ರ ಬಿಂದು.

'ಈಟಿವಿ ಭಾರತ' ಜೊತೆ ಮಾತನಾಡಿರುವ ಮೈಸೂರು ರೈಲ್ವೆ ವಿಭಾಗೀಯ ಅಧಿಕಾರಿ (ಡಿಆರ್​ಎಂ) ಅಪರ್ಣ ಗಾಗ್೯ ಅವರು ಈ ಕುರಿತು ವಿವರಣೆ ನೀಡಿದ್ದಾರೆ. ಬೇರೆ ಕಡೆಯಿಂದ ನಗರಕ್ಕೆ ಬರಲಿರುವ ಪ್ರವಾಸಿಗರು ಸವಿ ನೆನಪೊಂದನ್ನು ತಮ್ಮೊಂದಿಗೆ ಒಯ್ಯಲಿ ಎಂಬ ಸದುದ್ದೇಶದಿಂದ ರೈಲ್ವೆ ನಿಲ್ದಾಣದ ಮುಂದೆ 'ಐ ಲವ್‌ ಮೈಸ್‌' ಚಿಹ್ನೆ ನಿರ್ಮಿಸಲಾಗಿದೆ.

ABOUT THE AUTHOR

...view details