ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಗೊರಿಲ್ಲಾದ ಜನ್ಮದಿನವನ್ನು ವಿವಿಧ ತರಕಾರಿಗಳನ್ನು ಜೋಡಿಸಿ ವಿಶಿಷ್ಟ ರೀತಿಯಲ್ಲಿ ಇಂದು ಆಚರಣೆ ಮಾಡಲಾಯಿತು.
ಜರ್ಮನಿಯಿಂದ ಕಳೆದ ಅಕ್ಟೋಬರ್ನಲ್ಲಿ ಮೈಸೂರಿನ ಮೃಗಾಲಯಕ್ಕೆ ತರಲಾಗಿದ್ದ ಎರಡು ಸಹೋದರ ಗೊರಿಲ್ಲಾಗಳಲ್ಲಿ ಒಂದಾದ ಡೆಂಬ ಹೆಸರಿನ ಗೊರಿಲ್ಲಾಗೆ ಇಂದು 9ನೇ ವರ್ಷದ ಜನ್ಮ ಸಂಭ್ರಮ. ಹೀಗಾಗಿ ಅದು ತಿನ್ನುವ ವಿವಿಧ ತರಕಾರಿಗಳನ್ನು 'ವಿಶ್ ಯೂ ಹ್ಯಾಪಿ ಬರ್ತ್ಡೇ ಡೆಂಬ' ಎಂದು ಜೋಡಿಸಿ ಮೃಗಾಲಯದ ಸಿಬ್ಬಂದಿ ವಿಶಿಷ್ಟ ರೀತಿಯಲ್ಲಿ ಆಚರಿಸಿ ಶುಭ ಕೋರಿದ್ದಾರೆ.