ಕರ್ನಾಟಕ

karnataka

ETV Bharat / city

ರೈತನ ಮಗಳು 20 ಚಿನ್ನದ ಪದಕ ಪಡೆದ ಯಶೋಗಾಥೆ.. ಸಾಧಕಿಯೊಂದಿಗೆ 'ಈ' ಸಂದರ್ಶನ.. - ಚೈತ್ರಾ ನಾರಾಯಣ ಹೆಗಡೆ

ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬರಲ್ಲ ಎಂಬ ಕೀಳರಿಮೆ ಬೇಡ. ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ. ನಿಮ್ಮ ಭಾಷೆಯಲ್ಲೇ ಮಾತನಾಡಿ. ಚೆನ್ನಾಗಿ ಓದಿ ಯಶಸ್ಸು ಖಂಡಿತಾ ಸಿಗುತ್ತದೆ..

ಚೈತ್ರಾ ನಾರಾಯಣ ಹೆಗಡೆ
ಚೈತ್ರಾ ನಾರಾಯಣ ಹೆಗಡೆ

By

Published : Sep 7, 2021, 2:34 PM IST

ಮೈಸೂರು :ಸಾಧನೆ ಸಾಧಿಸೋರ ಸ್ವತ್ತು ಅನ್ನೋದಕ್ಕೆ ಈ ರೈತನ ಮಗಳೇ ಸಾಕ್ಷಿ. ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಕುಗ್ರಾಮದಿಂದ ಬಂದ ರೈತನ ಮಗಳು 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದಿದಾರೆ. ಈ ಸಾಧನೆಗೆ ಕಾರಣವಾದ ಚೈತ್ರಾ ನಾರಾಯಣ ಹೆಗಡೆ 'ಈಟಿವಿ ಭಾರತ'ದ ಜತೆ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.‌

ಇಂದು ಕ್ರಾಫರ್ಡ್ ಹಾಲ್​ನ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶೀಗೇಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ಅವರು ಎಂಎ ರಸಾಯನಶಾಸ್ತ್ರ ವಿಭಾಗದಲ್ಲಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದಿದಾರೆ.

ಸಾಧನೆ ಸಾಧಿಸುವವರ ಸ್ವತ್ತು.. ಅದಕ್ಕೆ ಈ ಸಾಧಕಿಯೇ ಸಾಕ್ಷಿ..

ಈ ಕುರಿತು ಮಾತನಾಡಿರುವ ಅವರು, ನಾನು 1 ರಿಂದ 10ನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿ ಓದಿದೆ. ಅಲ್ಲಿಂದ ಮೈಸೂರಿಗೆ ಬಂದು ಬಿಎಸ್​ಸಿಗೆ ಸೇರಬೇಕಾದರೆ ತುಂಬಾ ಭಯವಾಯಿತು.

ಆದರೂ ಎಲ್ಲರ ಸಹಾಯದಿಂದ ನಾನು ಪಿಜಿಯಲ್ಲಿ ಉಳಿದು ವಿದ್ಯಾಭ್ಯಾಸ ಮಾಡಿದೆ. ಎಂಎಸ್​ಸಿ ರಸಾಯನಶಾಸ್ತ್ರ ವಿಭಾಗದಲ್ಲಿ 20 ಚಿನ್ನದ ಪದಕ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಮೆಡಿಕನಲ್ ಕೆಮಿಸ್ಟ್ರಿ ಮಾಡುವುದಾಗಿ ಹೇಳಿದರು.

ಜೊತೆಗೆ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬರಲ್ಲ ಎಂಬ ಕೀಳರಿಮೆ ಬೇಡ. ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ. ನಿಮ್ಮ ಭಾಷೆಯಲ್ಲೇ ಮಾತನಾಡಿ. ಚೆನ್ನಾಗಿ ಓದಿ ಯಶಸ್ಸು ಖಂಡಿತಾ ಸಿಗುತ್ತದೆ ಎಂದು ಹೇಳಿದ್ದಾರೆ. ಚೈತ್ರಾಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್​ 20 ಚಿನ್ನದ ಪದಕ 4 ನಗದು ಬಹುಮಾನ ವಿತರಿಸಿದರು.

ABOUT THE AUTHOR

...view details