ಕರ್ನಾಟಕ

karnataka

ETV Bharat / city

ದೇಶದಲ್ಲೇ ಮೊದಲ ಬೃಹತ್ ಏಕಶಿಲಾ ಸುಬ್ರಮಣ್ಯ ಮೂರ್ತಿ ನಂಜನಗೂಡಲ್ಲಿ ಪ್ರತಿಷ್ಠಾಪನೆಗೆ ಸಿದ್ಧ - ದೇಶದಲ್ಲೇ ಮೊಟ್ಟ ಮೊದಲ ಬೃಹತ್ ಏಕಶಿಲಾ ಸುಬ್ರಮಣ್ಯ ಮೂರ್ತಿ

ದೇಶದಲ್ಲೇ ಮೊಟ್ಟ ಮೊದಲ ಏಕಶಿಲಾ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸುಬ್ರಮಣ್ಯ ಸ್ವಾಮಿ ಮೂರ್ತಿ ನಂಜನಗೂಡಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.

subramany swamy statue
ಸುಬ್ರಮಣ್ಯ ಮೂರ್ತಿ

By

Published : May 11, 2022, 5:23 PM IST

ಮೈಸೂರು : ದೇಶದಲ್ಲೇ ಮೊಟ್ಟ ಮೊದಲ 18 ಅಡಿ ಎತ್ತರದ ಬೃಹತ್ ಏಕಶಿಲಾ ಸುಬ್ರಮಣ್ಯ ಮೂರ್ತಿಯನ್ನ 36 ಅಡಿ ಪೀಠದಲ್ಲಿ ಮೇ15 ರಂದು ನಂಜನಗೂಡಿನ ಗಟ್ಟೆವಾಡಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇದು ದೇಶದ ಮೊದಲ ಬೃಹತ್ ಏಕಶಿಲಾ ಸುಬ್ರಮಣ್ಯ ಮೂರ್ತಿ ಎಂಬ ಖ್ಯಾತಿ ಪಡೆಯಲಿದೆ.

ತಪೋಭೂಮಿ ಟ್ರಸ್ಟ್ ವತಿಯಿಂದ ಗ್ರಾಮದ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಮೂರ್ತಿಯ ನಿರ್ಮಾಣಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ದೇಶದಲ್ಲಿ ಮೊಟ್ಟಮೊದಲ ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು ಇದೇ ತಿಂಗಳ 15 ರಂದು ಈ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ.

ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಸುಬ್ರಮಣ್ಯಸ್ವಾಮಿ ಏಕಶಿಲಾ ಮೂರ್ತಿ

ದೇಗುಲದ ವಿಶೇಷತೆಗಳು ಇಂತಿವೆ.. ಸುಮಾರು ಎಂಟು ಎಕರೆ ವಿಸ್ತೀರ್ಣದಲ್ಲಿ ದೇಗುಲ, ಕಲ್ಯಾಣಿ, ಗೋಶಾಲೆ, ದಾಸೋಹ ಭವನ, ಸೇರಿದಂತೆ ಪುಣ್ಯಕ್ಷೇತ್ರ ನಿರ್ಮಾಣವಾಗಿದೆ. ಇದರಲ್ಲಿ 108 -108 ಅಳತೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರ ಮೂರ್ತಿಯನ್ನು 36 ಅಡಿಯ ಪೀಠದಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜೊತೆಗೆ ಪರಿವಾರ ದೇವತೆಗಳಾದ ಶ್ರೀ ಮೇರು ಸಹಿತ ರಾಜರಾಜೇಶ್ವರಿ, ಶ್ರೀಲಕ್ಷ್ಮೀ ನರಸಿಂಹ, ಪಂಚಮುಖಿ ಆಂಜನೇಯ ಹಾಗೂ ಏಕದಶ ಮುಖಗಳ ಈಶ್ವರ ಸನ್ನಿಧಾನಗಳನ್ನ ಒಳಗೊಂಡಿದೆ.

ಭಕ್ತರ ಸಂಕಷ್ಟ ನಿವಾರಣೆಗೆ ವಿಶೇಷ ಸೇವೆಗಳು.. ಶ್ರೀ ಕ್ಷೇತ್ರದಲ್ಲಿ ಭಕ್ತರ ಸಂಕಷ್ಟಗಳ ನಿವಾರಣೆಗಾಗಿ ನಾಗ ಪ್ರತಿಷ್ಠಾಪನೆ ಆಶ್ಲೇಷ ಬಲಿ ಪೂಜೆ, ಸರ್ಪಸಂಸ್ಕಾರ ಸರ್ಪ ಹೋಮ ಕಾರ್ಯ ಶ್ರೀ ಸುಬ್ರಮಣ್ಯ ಹೋಮ ಗ್ರಹಶಾಂತಿ, ನವಗ್ರಹ ಹೋಮ ಸೇರಿದಂತೆ ಅನೇಕ ಸೇವೆಗಳನ್ನು ಮಾಡಲಾಗುತ್ತದೆ.

ಇದಷ್ಟೇ ಅಲ್ಲದೆ ಶ್ರೀ ಕ್ಷೇತ್ರದಲ್ಲಿ ಗೋಶಾಲೆಯನ್ನು ಪ್ರಾರಂಭಿಸಿದ್ದು, ಎಂಟು ಹಸುಗಳನ್ನ ಪಾಲನೆ ಮಾಡಲಾಗುತ್ತಿದೆ. ಅವುಗಳಿಂದ ಬಂದ ಹಾಲನ್ನ ಅಭಿಷೇಕಕ್ಕಾಗಿ ಬಳಸಲಾಗುತ್ತಿದೆ. ಇನ್ನುಳಿದ ಹಾಲನ್ನ ಹಾಲು ಮಾರಾಟ ಕೇಂದ್ರಗಳಿಗೆ ಸರಬರಾಜು ಮಾಡಿ, ಅದರಿಂದ ಬಂದ ಹಣವನ್ನು ಗೋಶಾಲೆ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ.. ಮೈಸೂರು ಮೃಗಾಲಯದಲ್ಲಿ ಮೂರು ಹುಲಿ‌ ಮರಿಗಳ ಜನನ

For All Latest Updates

ABOUT THE AUTHOR

...view details