ಮೈಸೂರು: ಕೊರೊನಾದಿಂದ ಪೋಷಕರು ಮೃತಪಟ್ಟು ಅನಾಥವಾದ ಮಕ್ಕಳು ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬದ ಮಕ್ಕಳಿಗೆ 1 ರಿಂದ 10ನೇ ತರಗತಿಯವರೆಗೆ ಸುತ್ತೂರು ಮಠ ಉಚಿತ ಶಿಕ್ಷಣ ಹಾಗೂ ವಸತಿಯನ್ನು ಕಲ್ಪಿಸಿಕೊಡುತ್ತದೆ ಎಂದು, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಘೋಷಣೆ ಮಾಡಿದರು.
ಸಂಕಷ್ಟದಲ್ಲಿರುವ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ: ಸುತ್ತೂರು ಶ್ರೀ - ಸಂಕಷ್ಟದಲ್ಲಿರುವ ಕುಟುಂಬ
ಅನಾಥವಾದ ಮಕ್ಕಳು ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬದ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಶ್ರೀ ಮಠ ನಿರ್ಧರಿಸಿದೆ. ಜೂನ್ 1ರಿಂದ ದಾಖಲಾತಿಯನ್ನು ಆರಂಭಿಸಲಾಗುವುದು ಅಗತ್ಯವಿರುವ ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇಂದು ಸುತ್ತೂರು ಮಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲದಲ್ಲಿ ಮಠವು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಎಲ್ಲ ಜೆಎಸ್ಎಸ್ ವಿಧ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನಗಳನ್ನು ಕೊರೊನಾ ರೋಗಿಗಳಿಗೆ ವಿಶ್ರಾಂತಿ ವ್ಯವಸ್ಥೆ ಮಾಡಲು ನಿರ್ಣಯಿಸಲಾಗಿದೆ. ಸುಮಾರು 6 ರಿಂದ 8 ಸಾವಿರ ಬೆಡ್ ಮಾಡುವ ಸಮುದಾಯ ಭವನಗಳನ್ನು ಜಿಲ್ಲಾಡಳಿತಕ್ಕೆ ನೀಡಲು ಸುತ್ತೂರು ಮಠ ನಿರ್ಧರಿಸಿದ್ದು ಇದರಲ್ಲಿ ಊಟದ ವ್ಯವಸ್ಥೆಯನ್ನು ಶ್ರೀ ಮಠವೇ ಮಾಡಲಿದೆ. ಚಿಕಿತ್ಸಾ ಅಥವಾ ಇತರ ವ್ಯವಸ್ಥೆಯನ್ನು ಸರ್ಕಾರವೇ ಮಾಡಬೇಕೆಂದು ಶ್ರೀಗಳು ಹೇಳಿದರು.
ಇದೇ ರೀತಿ ಕೊರೊನಾಕ್ಕೆ ಪೋಷಕರು ಮೃತಪಟ್ಟು ಅನಾಥವಾದ ಮಕ್ಕಳು ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬದ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಶ್ರೀ ಮಠ ನಿರ್ಧರಿಸಿದೆ. ಜೂನ್ 1ರಿಂದ ದಾಖಲಾತಿಯನ್ನು ಆರಂಭಿಸಲಾಗುವುದು ಅಗತ್ಯವಿರುವ ಮಕ್ಕಳು ಈ ಸೌಲಭ್ಯ ಪಡೆದುಕೊಳ್ಳಬಹುದು. ರಾಜ್ಯ ಹಾಗೂ ಹೊರ ರಾಜ್ಯದ ಮಕ್ಕಳು ಕೂಡ ಈ ಸೌಲಭ್ಯ ಪಡೆಯಬಹುದು. ಕೋವಿಡ್ ಸಂಕಷ್ಟದಲ್ಲಿ ಎಲ್ಲ ರೀತಿಯಲ್ಲೂ ಸರ್ಕಾರಕ್ಕೆ ಸಹಾಯ ಮಾಡುವುದಾಗಿ ಸುತ್ತೂರು ಶ್ರೀಗಳು ತಿಳಿಸಿದರು.