ಮೈಸೂರು :ಕಾವೇರಿ ಹಾಗೂ ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟಿರುವುವ ಹಿನ್ನಲೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತಪರ ಸಂಘಟನೆಗಳು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.
ತಮಿಳುನಾಡಿಗೆ ನೀರು: ರೈತ ಸಂಘಟನೆಗಳಿಂದ ಪ್ರತಿಭಟನೆ - Kannada news
ಜಲಾಶಯಗಳ ಭಾಗದಲ್ಲಿರುವ ಬೆಳೆಗಳು ನಾಶವಾಗಿದೆ. ನಮಗೆ ನೀರು ಬಿಟ್ಟಿದ್ದರೆ ಬೆಳೆಗಳು ಉಳಿದು ರೈತರು ಸಂತಸಗೊಳ್ಳುತ್ತಿದ್ದರು. ಆದ್ರೆ ನಮ್ಮ ರೈತರ ಹಿತಕಾಯದೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ತಮಿಳುನಾಡಿಗೆ ನೀರು ಬಿಟ್ಟಿ ಹಿನ್ನೆಲೆ ರೈತ ಸಂಘಟನೆಗಳಿಂದ ಪ್ರತಿಭಟನೆ
ಈಗಾಗಲೇ ಮುಂಗಾರ ಕೈಕೊಟ್ಟಿದೆ. ನೀರಿಲ್ಲದೆ ಬೆಳೆಗಳು ನಾಶವಾಗಿವೆ. ಆದರೂ ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಸರಿಯಾದ ಸಮಯಕ್ಕೆ ನೀರು ಬಿಟ್ಟಿದ್ದರೆ ಬೆಳೆಗಳು ಉಳಿದು ರೈತರು ಸಂತಸಗೊಳ್ಳುತ್ತಿದ್ದರು. ಸರ್ಕಾರ ನಮ್ಮ ರೈತರ ಹಿತ ಕಾಯದೆ ತಮಿಳುನಾಡಿಗೆ ನೀರು ಹರಿಸಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.