ಕರ್ನಾಟಕ

karnataka

ETV Bharat / city

ಮೈಸೂರು: ನಿಂದನೆ, ಬೆದರಿಕೆಗೆ ನೊಂದು ವೃದ್ಧ ಆತ್ಮಹತ್ಯೆ, ನಾಲ್ವರ ಬಂಧನ - ವೃದ್ಧ ಆತ್ಮಹತ್ಯೆ ಪ್ರಕರಣ

ಸಹೋದರನ ಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಕ್ಕಾಗಿ ನೊಂದ ವೃದ್ಧನೋರ್ವ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ನಾಲ್ವರನ್ನು ಹುಲ್ಲಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

mysore
ಹುಲ್ಲಹಳ್ಳಿ ಪೊಲೀಸ್​​ ಠಾಣೆ

By

Published : Oct 29, 2021, 12:18 PM IST

ಮೈಸೂರು:ಜಮೀನಿಗೆ ನೀರು ಹರಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಸಹೋದರನ ಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಕ್ಕಾಗಿ, ನೊಂದ ವೃದ್ಧನೋರ್ವ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ನಿವಾಸಿ ಕುಳ್ಳ ಶೆಟ್ಟಿ (60) ಆತ್ಮಹತ್ಯೆಗೆ ಶರಣಾದ ವೃದ್ಧ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತರ ಸಹೋದರ ಮಾದಶೆಟ್ಟಿ, ಸಹೋದರನ ಪತ್ನಿ ಸುಬ್ಬಮ್ಮ, ಪುತ್ರ ಸೋಮಣ್ಣ ಹಾಗು ಆತನ ಪತ್ನಿ ಮಧು ಅವರನ್ನು ಅರೆಸ್ಟ್ ಮಾಡಿದ್ದಾರೆ.

ಘಟನೆಯ ವಿವರ:
ಕುಳ್ಳಶೆಟ್ಟಿ ಮತ್ತು ಅವರ ಸಹೋದರ ಮಾದಶೆಟ್ಟಿ, ದುಗ್ಗಹಳ್ಳಿ ಶಿವಮೂರ್ತಿ ಅವರ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವಾಗ ಜಮೀನಿಗೆ ನೀರು ಹರಿಸುವ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ನಾಲ್ವರು ಆರೋಪಿಗಳು ಕುಳ್ಳಶೆಟ್ಟಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಲ್ಲದೇ ಸಹೋದರನ ಸೊಸೆ ಮಧು ಪೊಲೀಸ್ ಠಾಣೆಯಲ್ಲಿ ಮಾನಭಂಗ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇದರಿಂದ‌‌ ನೊಂದ ಕುಳ್ಳಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದು, ತಂದೆ ಸಾವಿಗೆ ಮಾದಶೆಟ್ಟಿ ಕುಟುಂಬದ ಸದಸ್ಯರು ಕಾರಣ ಎಂದು ಕುಳ್ಳಶೆಟ್ಟಿ ಮಗ ಮಂಜುನಾಥ್ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ‌ ದೂರು ನೀಡಿದ್ದರು. ಈ ದೂರಿ‌ನ ಅನ್ವಯ ಪೊಲೀಸರು ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್​​ಪೆಕ್ಟರ್ ಲಕ್ಷ್ಮೀಕಾಂತ ತಳವಾರ, ಹುಲ್ಲಹಳ್ಳಿ ಸಬ್‌ಇನ್ಸ್‌ಪೆಕ್ಟರ್ ರಾಘವೇಂದ್ರ ಖಠಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮೊದಲ ಮಹಡಿಯಿಂದ 2ನೇ ತರಗತಿ ಬಾಲಕನ ತಲೆಕೆಳಗಾಗಿ ನೇತು ಹಾಕಿದ ಪ್ರಾಂಶುಪಾಲ

ABOUT THE AUTHOR

...view details