ಮೈಸೂರು:ಜಿಲ್ಲೆಯಲ್ಲಿಂದು ಒಂದೇ ದಿನ 59 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 586ಕ್ಕೆ ಏರಿಕೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿಂದು 59 ಕೊರೊನಾ ಕೇಸ್ ಪತ್ತೆ: 18 ಮಂದಿ ಗುಣಮುಖ
ಮೈಸೂರು ಜಿಲ್ಲೆಯಲ್ಲಿಂದು ಒಂದೇ ದಿನ 59 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ ಇಂದು 48 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದು, 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿತರ ಸಂಪರ್ಕದಿಂದ 23 ಮಂದಿ, ಐಎಲ್‌ಐನಿಂದ 15 ಮಂದಿ, ದೇಶಿಯ ಪ್ರಯಾಣ 8 ಮಂದಿ, ಎಸ್‌ಎಆರ್‌ಐ 8 ಮಂದಿ, ಆರೋಗ್ಯ ಇಲಾಖೆಯ ನಾಲ್ವರು ನೌಕರರು, ಮೂವರು ಪೊಲೀಸರು, ಓರ್ವ ಗರ್ಭಿಣಿ ಹಾಗೂ ಓರ್ವ ಬಾಣಂತಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಇಂದು 48 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದು, 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
24,571 ಮಂದಿಗೆ ಈವರೆಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 23,982 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು 586 ಸೋಂಕಿತರ ಪೈಕಿ 322 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 239 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 13 ಮಂದಿ ಕೊರೊನಾಗೆ ಬಲಿಯಾಗಿದ್ದು, 37 ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.