ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿ ಪರಾರಿಯಾದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೈಸೂರಿನ ರಾಘವೇಂದ್ರ ನಗರದ ನಿವಾಸಿ ಸುರೇಂದ್ರ ಎಂಬುವರಿಗೆ ಸೇರಿದ ಕಾರುಗಳಿಗೆ ಮಧ್ಯರಾತ್ರಿ ಪೆಟ್ರೋಲ್ ಸುರಿದು ಕಿಡಿಗೇಡಿ ಬೆಂಕಿ ಹಚ್ಚಿದ್ದಾನೆ. ಬೆಂಕಿಗೆ ಕಾರುಗಳು ಧಗಧಗನೆ ಹೊತ್ತಿ ಉರಿದಿವೆ. ಈ ಸಂಬಂಧ ನಜರಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿ!: ನೋಡಿ - cars crashed in Bengaluru
ಎರಡು ಕಾರುಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ನಜರಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ರೀತಿ ಬೆಂಗಳೂರಿನಲ್ಲೂ ಘಟನೆಯೊಂದು ಜರುಗಿದೆ.
ಬೆಂಗಳೂರಿನಲ್ಲಿ ತಡರಾತ್ರಿ ಇಂಥದ್ದೇ ಘಟನೆ ನಡೆದಿದೆ. ಪುಂಡರ ಹಾವಳಿಗೆ ಮನೆಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾನಪ್ಪನಹಳ್ಳಿಯ ಸುಗಮಾ ಬಡಾವಣೆಯಲ್ಲಿ ಘಟನೆ ನಡೆದಿದ್ದು, ರಾತ್ರಿ ವೇಳೆ ಏರಿಯಾಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಹಾಲೋಬ್ಲಾಕ್ ಇಟ್ಟಿಗೆಗಳನ್ನ ಕಾರುಗಳ ಮೇಲೆ ಎತ್ತಿಹಾಕಿದ್ದಾರೆ. ವ್ಯಾಗನಾರ್, ಎರ್ಟಿಗಾ, ಇಟಿಯೋಸ್ ಹಾಗೂ ಲೋಗನ್ ಕಾರಿನ ಗಾಜುಗಳು ಜಖಂಗೊಂಡಿವೆ. ಪುಂಡರ ಹಾವಳಿ ಕಾರು ಮಾಲೀಕರು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ