ಮೈಸೂರು: ಬಿಜೆಪಿ ಅಧಿಕಾರಕ್ಕೆ ಅನೈತಿಕ ಮಾರ್ಗ ಅನುಸರಿಸುತ್ತಿದೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಅನೈತಿಕ ಮಾರ್ಗ ಹಿಡಿಯುತ್ತದೆ: ಯತೀಂದ್ರ ಸಿದ್ದರಾಮಯ್ಯ - ಮೈಸೂರು
ಬಿಜೆಪಿ ಪದೇ ಪದೇ ಆಪರೇಷನ್ ಕಮಲಕ್ಕೆ ಕೈ ಹಾಕುತ್ತಿದೆ ಇದು ಸರಿಯಾದ ಮಾರ್ಗವಲ್ಲ. ಸಮ್ಮಿಶ್ರ ಸರ್ಕಾರದ ಶಾಸಕರು ಅವರ ಪಕ್ಷಕ್ಕೆ ಹೋಗದೆ ಇದ್ದರೂ ಅವರಿಗೆ ಆಮಿಷವೊಡ್ಡುವ ಕೆಲಸ ಮಾಡುತ್ತಿದೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ
ನಗರದ ಗಾಂಧಿವೃತ್ತದ ಬಳಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಸಹಿಸಿದೆ, ಬಿಜೆಪಿ ಪದೇ ಪದೇ ಆಪರೇಷನ್ ಕಮಲಕ್ಕೆ ಕೈ ಹಾಕುತ್ತಿದೆ ಎಂದು ಆರೋಪಿಸಿದರು.
ಬಿಎಸ್ವೈ ಆಡಿಯೋ ಅವರ ನಡವಳಿಕೆ ದೇಶಕ್ಕೆ ಗೊತ್ತಾಗಿದೆ ಎಂದು ಕಿಡಿಕಾರಿದರು. ಸಮ್ಮಿಶ್ರ ಸರ್ಕಾರದಿಂದ ಯಾವೊಬ್ಬ ಶಾಸಕರು ಹೋಗದೇ ಇದ್ದರೂ, ಬಲವಂತವಾಗಿ ಆಮಿಷವೊಡ್ಡುತ್ತಾರೆ.ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
Last Updated : Feb 9, 2019, 3:26 PM IST