ಮಂಗಳೂರು:ನಮ್ಮ ದೇಶವು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಇಂದು ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಇರಿಸುವ ಪ್ರಯತ್ನವಾಗುತ್ತಿದೆ ಎಂದು ಮ್ಯಾಗ್ಸಸೆ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ ಹೇಳಿದರು.
ಸಂವಿಧಾನದ ಜಾಗದಲ್ಲಿ ಮನುಸ್ಮೃತಿ ಇರಿಸುವ ಯತ್ನ ನಡೆಯುತ್ತಿದೆ: ಪಿ.ಸಾಯಿನಾಥ್ - ಸಂವಿಧಾನದಲ್ಲಿ ಅಂಬೇಡ್ಕರ್ ಏನು ಹೇಳಿದ್ದಾರೋ ಅದರ ಆಶಯದಂತೆ ಈ ಹೋರಾಟ
ನಮ್ಮ ದೇಶವು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಇಂದು ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಇರಿಸುವ ಪ್ರಯತ್ನವಾಗುತ್ತಿದೆ ಎಂದು ಮ್ಯಾಗ್ಸಸೆ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ ಹೇಳಿದರು.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂದು ನಡೆದ 'ಮೀಡಿಯಾ ಮಂಥನ್' ರಾಷ್ಟ್ರೀಯ ಮಾಧ್ಯಮ ಉತ್ಸವದಲ್ಲಿ ಮಾತನಾಡಿದ ಅವರು, ಸಂವಿಧಾನದ ಜಾಗದಲ್ಲಿ ಮನುಸ್ಮೃತಿ ಇರಿಸಲು ಪ್ರಯತ್ನ ಪಡುವವರೇ ಹಿಂದೆ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಮೂಲೆಗುಂಪು ಮಾಡಿದ್ದರು. ಆದರೆ ಇಂದು ಅವರೇ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗಳ ರಕ್ಷಕರಾಗಿ ಬಿಂಬಿತವಾಗಿರೋದು ವಿಪರ್ಯಾಸ ಎಂದು ಹೇಳಿದರು.
ಸಿಎಎ, ಎನ್ ಆರ್ ಸಿ ವಿರುದ್ಧ ವಿವಿಧ ಧರ್ಮದ, ಜನರು ಮುಸ್ಲಿಮರಿಗೆ ಬೆಂಬಲ ನೀಡಿ ಹೋರಾಟ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಅಂಬೇಡ್ಕರ್ ಏನು ಹೇಳಿದ್ದಾರೋ ಅದರ ಆಶಯದಂತೆ ಈ ಹೋರಾಟ ನಡೆಯುತ್ತಿದೆ. ಸಂವಿಧಾನದ ರಕ್ಷಣೆಗೆ ಇದೊಂದು ಉತ್ತಮ ಬೆಳವಣಿಗೆ ಎಂದು ಪಿ.ಸಾಯಿನಾಥ್ ಹೇಳಿದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಕಾಲೇಜಿನ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಫಾ.ಮೆಲ್ವಿನ್ ಪಿಂಟೊ ಎಸ್.ಜೆ., ದೇವಿಶ್ರೀ ಶೆಟ್ಟಿ, ಹರ್ಷಿತಾ ವರ್ಗೀಸ್, ವೈಶಾಲಿ ಪುತ್ರನ್ ಉಪಸ್ಥಿತರಿದ್ದರು.