ಮಂಗಳೂರು :ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಮೇಲೆ ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳು ಕಲ್ಲೆಸೆದು (stone throw on bus) ಪರಾರಿಯಾಗಿದ್ದಾರೆ. ಬಸ್ನ ಸಂಚಾರ ಸಮಯ ವಿಚಾರಕ್ಕೆ ಸಂಬಂಧಿಸಿ ಈ ಘಟನೆ ಜರುಗಿರಬಹುದು ಎಂದು ಹೇಳಲಾಗಿದೆ.
ಮಂಗಳೂರಿನಲ್ಲಿ ಖಾಸಗಿ ಬಸ್‌ಗೆ ಕಲ್ಲೆಸೆತ : ಮೂರು ದಿನದ ಅಂತರದಲ್ಲಿ ಎರಡು ಪ್ರಕರಣ - dakshina kannada news
ಶನಿವಾರದಂದು ಇದೇ ಸ್ಥಳದಲ್ಲಿ ನಗರ ಸಾರಿಗೆ ಬಸ್‌ಗೆ ಕಲ್ಲೆಸೆಯಲಾಗಿತ್ತು. ಮೂರು ದಿನದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಖಾಸಗಿ ಬಸ್ಸಿಗೆ ಕಲ್ಲೆಸೆತ
ಎಕೆಎಂಎಸ್ ಎಕ್ಸ್‌ಪ್ರೆಸ್ ಹೆಸರಿನ ಬಸ್ (stone throw on private bus in mangalore) ಉಡುಪಿಯಿಂದ ಮಂಗಳೂರಿಗೆ ಬರುತ್ತಿತ್ತು. ಕೊಟ್ಟಾರದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಬಸ್ನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಕಲ್ಲೆಸೆತದಿಂದ ಬಸ್ಸಿನ ಎದುರಿನ ಗಾಜಿಗೆ ಹಾನಿಯಾಗಿದೆ.
ಶನಿವಾರದಂದು ಇದೇ ಸ್ಥಳದಲ್ಲಿ ನಗರ ಸಾರಿಗೆ ಬಸ್‌ಗೆ ಕಲ್ಲೆಸೆಯಲಾಗಿತ್ತು. ಮೂರು ದಿನದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.