ಮಂಗಳೂರು:ನಗರದ ಐಕಳಬಾವಾದಲ್ಲಿ ಭಾನುವಾರ ನಡೆದ ಕಂಬಳ ಓಟದಲ್ಲಿ 'ಕಂಬಳ ವೀರ' ಶ್ರೀನಿವಾಸಗೌಡ ಅವರು ಕಳೆದ ಬಾರಿಯ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ಕಂಬಳದ 'ಉಸೇನ್ ಬೋಲ್ಟ್' ಎಂದು ಖ್ಯಾತರಾಗಿರುವ ಶ್ರೀನಿವಾಸಗೌಡ, 125 ಮೀಟರ್ ದೂರವನ್ನು 11.64 ಸೆಕೆಂಡ್ನಲ್ಲಿ ಕ್ರಮಿಸಿದ್ದಾರೆ. ಅದನ್ನು 100 ಮೀಟರ್ಗೆ ಇಳಿಸಿದರೆ 9.31 ಸೆಕೆಂಡ್ನಲ್ಲಿ ಕ್ರಮಿಸಿದ್ದಾರೆ.
ಇದನ್ನೂ ಓದಿ...9.15 ಸೆಕೆಂಡ್ಗಳಲ್ಲಿ 100 ಮೀ ಓಟ: ಶ್ರೀನಿವಾಸ್ ಗೌಡರ ದಾಖಲೆ ಮುರಿದ ಬೈಂದೂರಿನ ವಿಶ್ವನಾಥ್!
ಈ ಮೂಲಕ ತಾವು ಕಳೆದ ವರ್ಷ ಇದೇ ಐಕಳಬಾವಾದಲ್ಲಿ ಮಾಡಿದ್ದ 100 ಮೀಟರ್ ಅನ್ನು 9.55 ಸೆಕೆಂಡ್ನಲ್ಲಿ ಮುಟ್ಟಿರುವ ದಾಖಲೆಯನ್ನು ಅವರೇ ಮುರಿದಿದ್ದಾರೆ. ಆದರೆ, ಶನಿವಾರ ಇದೇ ಕಂಬಳದಲ್ಲಿ 9.15 ಸೆಕೆಂಡ್ನಲ್ಲಿ ಓಡಿದ್ದ ಯುವ ಕಂಬಳ ಓಟಗಾರ ವಿಶ್ವನಾಥ ಬೈಂದೂರು ಅವರ ದಾಖಲೆಯನ್ನು ಮುರಿಯಲು ಶ್ರೀನಿವಾಸಗೌಡರಿಗೆ ಸಾಧ್ಯವಾಗಲಿಲ್ಲ.