ಕರ್ನಾಟಕ

karnataka

ETV Bharat / city

ಯಡಿಯೂರಪ್ಪನವರ ಸರ್ಕಾರ ಮೂರುವರೆ ವರ್ಷ ಇರುವುದಿಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ - ದ.ಕ.ಜಿಲ್ಲಾ ಪ್ರವಾಸ

ವಿಧಾನಸಭಾ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಖಂಡಿತವಾಗಿಯೂ ಯಡಿಯೂರಪ್ಪನವರ ಸರ್ಕಾರ ಇನ್ನೂ ಮೂರುವರೆ ವರ್ಷ ನಡೆಯುದಿಲ್ಲ. ಯಾಕೆಂದರೆ, ಇದು ಅನೈತಿಕವಾಗಿ ಆಗಿರುವಂತಹ ಸರ್ಕಾರ ಎಂದು ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

By

Published : Aug 31, 2019, 11:22 PM IST

ಮಂಗಳೂರು: ವಿಧಾನಸಭಾ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಖಂಡಿತವಾಗಿಯೂ ಯಡಿಯೂರಪ್ಪನವರ ಸರ್ಕಾರ ಇನ್ನೂ ಮೂರುವರೆ ವರ್ಷ ನಡೆಯುದಿಲ್ಲ. ಯಾಕೆಂದರೆ, ಇದು ಅನೈತಿಕವಾಗಿ ಆಗಿರುವಂತಹ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗು..

ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಇಂದು ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಆಂಧ್ರ, ಗುಜರಾತ್, ಕೇರಳಗಳಲ್ಲಿ ಪ್ರವಾಹ ಆಗಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಬೀದಿಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದದ್ದು, ಸಾಂತ್ವನ ಹೇಳಬೇಕಾದದ್ದು ಸರ್ಕಾರದ ಆದ್ಯತೆ. ಆದರೆ, ಪ್ರಧಾನಿ ಮೋದಿಯವರು ವಿದೇಶ ಪ್ರವಾಸದಲ್ಲಿ ಮಜಾ ಮಾಡುತ್ತಿದ್ದಾರೆ. 2009ರಲ್ಲಿಯೂ ಕರ್ನಾಟಕದಲ್ಲಿ ಪ್ರವಾಹ ಬಂದಿತ್ತು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದರು. ಈಗಲೂ ಯಡಿಯೂರಪ್ಪ ನವರೇ ಮುಖ್ಯಮಂತ್ರಿಯಾಗಿದ್ದಾರೆ. ಎರಡೂ ಬಾರಿಯೂ ಪ್ರವಾಹ ಬಂದಾಗ ಅವರೇ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿ ಈ ಮುಂಚೆ ಪ್ರವಾಹವಾದಾಗ ಇದ್ದಂತಹ ಕಾಂಗ್ರೆಸ್ ಸರ್ಕಾರದಲ್ಲಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆ ಸಂದರ್ಭ ನಾವು ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ತಿಳಿಸಿದ್ದೆವು. ತಕ್ಷಣ ಮನಮೋಹನ್ ಸಿಂಗ್ ಅವರು ಏರಿಯಲ್ ಸರ್ವೇ ಮಾಡಿ ಸ್ಥಳದಲ್ಲಿಯೇ 1,600 ಕೋಟಿ ಘೋಷಣೆ ಮಾಡಿ ಬಿಡುಗಡೆ ಮಾಡಿದ್ದರು. ಆದರೆ, ಇಂದಿನ ಕೇಂದ್ರ ಸರ್ಕಾರ ಪ್ರವಾಹ ಬಂದು 22 ದಿನಗಳಾದರೂ ಒಂದೇ ಒಂದು ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪನವರು ಹೇಳುತ್ತಾರೆ ಸೆ.7 ರಂದು ಮೋದಿ ಬೆಂಗಳೂರಿಗೆ ಬರುತ್ತಾರೆ. ಆಗ ಅವರು ಗಮನಕ್ಕೆ ತರುತ್ತಾರಂತೆ‌. ಯಡಿಯೂರಪ್ಪನವರೇ ನಿಮಗೆ ನಾಚಿಕೆಯಾಗೋದಿಲ್ವಾ, ಮಾನ‌ ಮರ್ಯಾದೆ ಇದೆಯಾ ಎಂದು ಸಿದ್ದರಾಮಯ್ಯ ಛೇಡಿಸಿದರು.

ದೇಶದಲ್ಲಿ ಎಲ್ಲಾ ಕಡೆಗಳಲ್ಲಿಯೂ ಆರ್ಥಿಕ ಕುಸಿತ ಕಾಣುತ್ತಿದೆ. ನಿರ್ಮಲಾ ಸೀತಾರಾಮನ್ 27 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು 12 ಮಾಡುತ್ತೇನೆಂದು ಹೇಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್‌ಗಳ ಜನಕ. ಇಲ್ಲಿನ ಎಲ್ಲಾ ಬ್ಯಾಂಕ್ ಗಳನ್ನು ಮುಚ್ಚುತ್ತಿದ್ದಾರೆ. ಕೇವಲ ಕೆನರಾ ಬ್ಯಾಂಕ್ ಮಾತ್ರ ಉಳಿಯುತ್ತಿದೆ. ಇಂದಿರಾ ಗಾಂಧಿಯವರು ಬ್ಯಾಂಕ್​ಗಳನ್ನು ರಾಷ್ಟ್ರೀಕರಣ ಮಾಡಿ, ಬಡವರಿಗೆ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವಂತಹ ಕೆಲಸ ಮಾಡಿದರು. ಆದರೆ, ಇಂದು ಬ್ಯಾಂಕ್​ಗಳು ಶ್ರೀಮಂತರಿಗೆ ಮಾತ್ರ ಬಾಗಿಲು ತೆರೆಯುತ್ತಿವೆ. ಬಡವರಿಗೆ ಬ್ಯಾಂಕ್​ಗಳು ಮುಚ್ಚುತ್ತಿವೆ ಎಂದು ನರೇಂದ್ರ ಮೋದಿಯವರ ಆರ್ಥಿಕ ನೀತಿ ಎಂದು ಅವರು ಟೀಕಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಈಗಿನಷ್ಟು ಎಂದೂ ಕೆಳಮಟ್ಟಕ್ಕಿಳಿದಿರಲಿಲ್ಲ. ಇದಕ್ಕೆ ಬಿಜೆಪಿ ಸರ್ಕಾರ, ನರೇಂದ್ರ ಮೋದಿ ನೇರ ಹೊಣೆಗಾರರು. ಇಂದು ನಮ್ಮ ಪಕ್ಷದವರ ಮೇಲೆ ಸೇಡಿನ ರಾಜಕಾರಣ ಮಾಡಲು ಹೊರಟಿದ್ದಾರೆ. ಇಡಿ, ಸಿಬಿಐ, ಚುನಾವಣಾ ಆಯೋಗ, ಆರ್​ಬಿಐ ಎಲ್ಲವನ್ನೂ ಕೈಗೊಂಬೆ ಮಾಡುತ್ತಿದ್ದಾರೆ. ಸಂವಿಧಾನದ ಮೇಲೆ ನಂಬಿಕೆಯಿರದ ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲು ಮಾಡಲು ಎಂದು ಅವರ ಮಂತ್ರಿ ಅನಂತ್ ಕುಮಾರ್ ಹೆಗ್ಡೆ ಎಷ್ಟೋ ಬಾರಿ ಹೇಳಿದ್ದಾರೆ ಎಂದು ಅವರು ಹೇಳಿದರು.

ABOUT THE AUTHOR

...view details