ಕರ್ನಾಟಕ

karnataka

ETV Bharat / city

ಮದುವೆಯಾಗುವುದಾಗಿ ನಂಬಿಸಿ ವಂಚನೆ: ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಹಿಳೆಯಿಂದ ಲಕ್ಷಾಂತರ ರೂ. ಪಡೆದು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ
Subramanya police station

By

Published : Aug 4, 2022, 12:18 PM IST

Updated : Aug 4, 2022, 1:51 PM IST

ಸುಬ್ರಹ್ಮಣ್ಯ: ಮಹಿಳೆಯನ್ನು ಲೈಂಗಿಕವಾಗಿ ಬಳಸಿ ಮದುವೆಯಾಗುತ್ತೇನೆ ಎಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು​ ದಾಖಲಾಗಿದೆ.

ಸಂತ್ರಸ್ತೆಯ ಪತಿ ತೀರಿಕೊಂಡಿದ್ದು, ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮೇ. 20 ರಂದು ರಾತ್ರಿ 10 ಗಂಟೆಗೆ ಪವನ್ ಎಂಬಾತ ಮದ್ಯಪಾನ ಮಾಡಿಕೊಂಡು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ. ಈ ಕುರಿತು ವಿಧವಾ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಹೇಳಿದಾಗ, ನಿನ್ನನ್ನು ಮದುವೆಯಾಗುತ್ತೇನೆ, ಪೊಲೀಸ್ ಕಂಪ್ಲೇಂಟ್​​​​ ನೀಡಬೇಡ ಎಂದು ಒತ್ತಾಯಿಸಿದ್ದ ಆರೋಪಿ, ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದಾನೆ.

ನಂತರ ಮಹಿಳೆಯಿಂದ 1.70 ಲಕ್ಷ ರೂಪಾಯಿ ಹಣ ಪಡೆದುಕೊಂಡು ಈಗ ಮದುವೆಯಾಗುವುದಿಲ್ಲ ಎಂದು ವಂಚಿಸಿದ್ದಾನೆ ಅಂತ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:ತಡರಾತ್ರಿ ಪ್ರಿಯಕರನ ಭೇಟಿ ಮಾಡಲು ತೆರಳಿದ್ದ ಪ್ರಿಯತಮೆ.. ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ನಾಲ್ವರು!

Last Updated : Aug 4, 2022, 1:51 PM IST

ABOUT THE AUTHOR

...view details