ಕರ್ನಾಟಕ

karnataka

ETV Bharat / city

ಅಕ್ರಮ ಮರಳು ಗಣಿಗಾರಿಕೆಗೆ ಬೆಳ್ತಂಗಡಿ, ಬಂಟ್ವಾಳದ ಶಾಸಕರ ಬೆಂಬಲ: ರಮಾನಾಥ ರೈ ಆರೋಪ

ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮರಳು ದಂಧೆ ಮತ್ತು ಜುಗಾರಿ ದಂಧೆಗಳಲ್ಲಿ ಶಾಸಕರ ಕೈವಾಡ ಇದೆ ಎಂದು ರಮಾನಾಥ ರೈ ನೇರವಾಗಿ ಆರೋಪಿಸಿದ್ದಾರೆ.

Ramanath Rai
ಅಕ್ರಮ ಮರಳು ಗಣಿಗಾರಿಕೆ ಬೆಳ್ತಂಗಡಿ ಮತ್ತು ಬಂಟ್ವಾಳದ ಶಾಸಕರ ಬೆಂಬಲ ಇದೆ

By

Published : Jul 6, 2022, 6:05 PM IST

ಬಂಟ್ವಾಳ(ದಕ್ಷಿಣ ಕನ್ನಡ) :ಎಎಸ್​ಪಿ ಶಿವಾಂಶು ರಜಪೂತ್ ಅವರನ್ನು ರಾಜಕೀಯ ಒತ್ತಡದಿಂದ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಕಾರಣ ಶಾಸಕರ ಬೆಂಬಲದಿಂದ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ, ಮರಳು ದಂಧೆ ಮತ್ತು ಜುಗಾರಿ ದಂಧೆಗಳಿಗೆ ಎಎಸ್​ಪಿ ಕಡಿವಾಣ ಹಾಕುತ್ತಿದ್ದರು ಎಂಬ ಕಾರಣಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಹಠಾತ್ತಾಗಿ ವರ್ಗಾವಣೆ ಮಾಡುವುದು ಎಷ್ಟು ಸರಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಶ್ನಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಬೆಳ್ತಂಗಡಿ ಮತ್ತು ಬಂಟ್ವಾಳದ ಶಾಸಕರ ಬೆಂಬಲ ಇದೆ

ಬಿ.ಸಿ.ರೋಡ್​ನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂಜು ಅಡ್ಡೆಯ ಬಳಿಯೇ ಕೊಲೆ ಯತ್ನ ಪ್ರಕರಣ, ಹಲ್ಲೆಗಳು ನಡೆದದ್ದು ವರದಿಯಾಗಿವೆ. ಹೆಣ್ಣುಮಕ್ಕಳ ಕರಿಮಣಿ ಅಡವಿಟ್ಟು ಜುಗಾರಿ ದಂಧೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಮರಳುಗಾರಿಕೆಯ ಪಕ್ಕದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಈ ಭಾಗದ ಬೆಳ್ತಂಗಡಿ ಮತ್ತು ಬಂಟ್ವಾಳದ ಇಬ್ಬರೂ ಶಾಸಕರ ಬೆಂಬಲ ಇದೆ ಎಂದು ನಾನು ನೇರವಾಗಿ ಆರೋಪಿಸಿದರು.

ಇದನ್ನೂ ಓದಿ:ಸಿದ್ದರಾಮೋತ್ಸವ ಆಯೋಜನೆಗೆ ಕೆ.ಎಸ್.ಈಶ್ವರಪ್ಪ ವಿರೋಧ.. ಇದೆಂಥಾ ದುಃಸ್ಥಿತಿ ಎಂದು ವ್ಯಂಗ್ಯ

ABOUT THE AUTHOR

...view details